ರಾಜಕೀಯ

ಬಜೆಟ್ ಮಂಡನೆ | ಅನ್ನಭಾಗ್ಯ ಯೋಜನೆಗೆ ಕತ್ತರಿ

Published

on

ಸುದ್ದಿದಿನ ಡೆಸ್ಕ್ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಅಬಾಧಿತವಾಗಿದ್ದು, ಯೋಜನೆಯ ಕೊಂಚ ಬದಲಾವಣೆ ಮಾಡಲಾಗಿದೆ.

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ವಿತರಿಸುತ್ತಿದ್ದ ಧಾನ್ಯ ಕಡಿತಗೊಳಿಸಿದ್ದು, ಫಲಾನುಭವಿಗಳು ಇನ್ನು 5 ಅಕ್ಕಿ, 1 ಲೀಟರ್​ ಪಾಮ್​ ಆಯಿಲ್​ ಹಾಗೂ ಒಂದು ಕೆಜಿ ಸೆಕ್ಕರೆ, ಅಥವಾ ಅರ್ಧ ಕೆಜಿ ತೊಗರಿ ಬೇಳೆ ಪಡೆಯಲಿದ್ದಾರೆ.

ಮೊದಲಿಗೆ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ಫಲಾನುಭವಿಗೆ 7 ಕೆಜಿ, ಒಂದು ಕೆಜಿ ತೊಗರಿ ಬೇಳೆ ವಿತರಿಸಲಾಗುತ್ತಿತ್ತು. ಆದರೆ, ಈಗ ಅಕ್ಕಿ ಎರಡು ಕೆಜಿ, ತೊಗರಿಬೇಳೆ ಒಂದು ಕೆಜಿ ಕಡಿತಗೊಳ್ಳಲಿದೆ.

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ

ಪ್ರಸಕ್ತ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಅವರು “ಮುಖ್ಯಮಂತ್ರಿ ಮಾತೃಶ್ರೀ ಯೋಜನೆ” ಜಾರಿ ಮಾಡಿದ್ದು, ಬಿಪಿಎಲ್​ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳವರೆಗೆ 1 ಸಾವಿರ ರೂಪಾಯಿ ಸಹಾಯಧನ ನೀಡಲು ನಿರ್ಧರಿಸುದ್ದಾರೆ. ಈ ಯೋಜನೆಗಾಗಿ ಸರ್ಕಾರ 350 ಕೋಟಿ ರೂ. ಮೀಸಲಿರಿಸಿದೆ.

ಸುದ್ದಿದಿನ.ಕಾಂ|ವಾಟ್ಸಪ್|9986715401

Leave a Reply

Your email address will not be published. Required fields are marked *

Trending

Exit mobile version