/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಬಜೆಟ್ ಮಂಡನೆ | ಸಾಲಮನ್ನಾ ಮಾರ್ಗ ಸೂಚಿಗಳು |ತಪ್ಪದೇ ಓದಿ

Published

on

ಸುದ್ದಿದಿನ ಡೆಸ್ಕ್ : ಇಂದು (ಜುಲೈ 05) ಮೈತ್ರಿ ಸರ್ಕಾರ ಚೊಚ್ಚಲ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದಾರೆ. ಆದರೆ ಈ ಸಾಲಾ ಮನ್ನಾದಲ್ಲಿ ಯಾವ ಸಾಲಾ ಮನ್ನಾ ಆಗುತ್ತದೆ , ಯಾವುದು ಆಗುವುದಿಲ್ಲ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮನ್ನಾ ಆಗುವ ಸಾಲ

• ರೈತರ ಪ್ರತಿ ಕುಟುಂಬದ ಗರಿಷ್ಠ 2 ಲಕ್ಷ ವರೆಗಿನ ಸುಸ್ತಿ ಸಾಲಮನ್ನಾ ಆಗುತ್ತದೆ.

•2009 ಏಪ್ರಿಲ್​ 1 ರ ನಂತರ 2017 ಡಿಸೆಂಬರ್​ ಒಳಗಿನ ಬಾಕಿ ಇರುವ ಅವಧಿ ಮೀರಿದ ಬೆಳೆ ಸಾಲ.

• ಪ್ಲಾಂಟೇಷನ್​, ತೋಟಗಾರಿಕೆ ಬೆಳೆಗಳಿಗೆ ನೀಡಿದ ಸಾಲ ಒಳಗೊಂಡಿರುತ್ತದೆ.

• ರಾಷ್ಟ್ರೀಕೃತ ಬ್ಯಾಂಕ್​, ಗ್ರಾಮೀಣ ಬ್ಯಾಂಕ್​, ಸಹಕಾರ ಕ್ರೆಡಿಟ್​ ಸೊಸೈಟ್​​, ರೈತ ಸೇವಾ ಸಹಕಾರ ಬ್ಯಾಂಕ್​, ಕಿಸಾನ್​ ಕ್ರೆಡಿಟ್​ ಕಾರ್ಡ್​ ಸಾಲ ಅನ್ವಯ, ರಾಜ್ಯದಲ್ಲಿರುವ ಒಟ್ಟು ಬೆಳೆ ಸಾಲ 55,328 ಕೋಟಿ ರೂ, ಒಟ್ಟು ಸುಸ್ತಿ ಸಾಲಗಳ ಸಂಖ್ಯೆ ಅಂದಾಜು 17.32 ಲಕ್ಷ ,ಸುಸ್ತಿ ಸಾಲದ ಮೊತ್ತ 30,266 ಕೋಟಿ ರೂ
ಚಾಲ್ತಿ ಸಾಲ ಹೊಂದಿರುವ ಸಾಲಗಾರರ ಸಂಖ್ಯೆ 26.67 ಲಕ್ಷ , ರೈತರ 44. 89 ಲಕ್ಷ ಸಾಲದ ಖಾತೆಗಳಿಗೆ 30, 159 ಕೋಟಿ ರೂ ಪ್ರಯೋಜನವಾಗಲಿದೆ.

ಯಾವುದು ಸಾಲ ಮನ್ನಾಗೆ ಒಳಪಡಲ್ಲ

1.ವೈಯಕ್ತಿಕ ರೈತ, ಹಿಂದೂ ಅವಿಭಾಜ್ಯ ಕುಟುಂಬ ಹೊರತು ಪಡಿಸಿ ಕಾನೂನು ಬದ್ಧ ಸಂಸ್ಥೆ.

2.ಆಭರಣ ಅಡಮಾನ ಸಾಲ-(ಚಿನ್ನ ಅಡವಿಟ್ಟು ಪಡೆದ ಸಾಲ).

3.ವಾಹನ ಖರೀದಿಗೆ ತೆಗೆದುಕೊಂಡ ಸಾಲ.

4.ಕೃಷಿ ಉತ್ಪನ್ನಗಳನ್ನು ಅಡವಿಟ್ಟು ಪಡೆದ ಸಾಲ.

5. ಸರ್ಕಾರಿ ನೌಕರರು- ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ನೀಡಿದ ಸಾಲ.

6.ನಾಲ್ಕು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿ, ಆದಾಯ ತೆರಿಗೆ ಪಾವತಿ ಮಾಡಿರುವ ರೈತರ ಸಾಲ ಮನ್ನಾ ಇಲ್ಲ.

7.ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಪಡೆದ ಸಾಲ ಮನ್ನ ಇಲ್ಲ.

8.ಪಿಂಚಿಣಿ ಪಡೆಯುತ್ತಿರುವ ನಿವೃತ್ತ ಸರ್ಕಾರಿ ನೌಕರರು ಪಡೆದಿರುವ ಕೃಷಿ ಸಾಲ ಮನ್ನಾ ಇಲ್ಲ .

9.ಗುತ್ತಿಗೆ ಕೃಷಿ ಮಾಡುವ ವ್ಯಕ್ತಿಗಳ ಸಾಲ ಮನ್ನ ಇಲ್ಲ.

10. ಸಕ್ಕರೆ ಕಾರ್ಖಾನೆಗಳಿಂದ ಪಡೆದ ಸಾಲ ಮನ್ನಾ ಇಲ್ಲ.

11.ಮೀನುಗಾರಿಕೆ, ಹೈನುಗಾರಿಕೆ ಸಾಲ ಮನ್ನ ಇಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version