ದಿನದ ಸುದ್ದಿ
ಪೌರತ್ವ ಪ್ರಮಾಣಪತ್ರ ಹಸ್ತಾಂತರ
ಸುದ್ದಿದಿನ ಡೆಸ್ಕ್ : ಪೌರತ್ವ ತಿದ್ದುಪಡಿ ನಿಯಮಗಳು 2024 ರ ಅಧಿಸೂಚನೆಯ ನಂತರ ಪೌರತ್ವ ಪ್ರಮಾಣ ಪತ್ರಗಳ ಮೊದಲ ಪ್ರತಿಗಳನ್ನು ಕೆಲ ಅರ್ಜಿದಾರರಿಗೆ ಬುಧವಾರ ವಿತರಿಸಲಾಯಿತು.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ 14 ಮಂದಿ ಅರ್ಜಿದಾರರಿಗೆ ಪೌರತ್ವ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಿದರು. ಇಮೇಲ್ ಮೂಲಕ ಡಿಜಿಟಲ್ ಸಹಿ ಹೊಂದಿದ ಪ್ರಮಾಣ ಪತ್ರಗಳನ್ನು ಇತರ ಹಲವು ಅರ್ಜಿದಾರರಿಗೆ ನೀಡಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಪೌರತ್ವ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ಅರ್ಜಿದಾರರನ್ನು ಅಭಿನಂದಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ, ಪೌರತ್ವ ತಿದ್ದುಪಡಿ ನಿಯಮಗಳು 2024ರ ಪ್ರಮುಖ ಲಕ್ಷಣಗಳನ್ನು ವಿವರಿಸಿದ್ದಾರೆ.
ಕಳೆದ ಮಾರ್ಚ್ 11 ರಂದು ಅಧಿಸೂಚನೆ ಹೊರಡಿಸಲಾಗಿದ್ದ ನಿಯಮಗಳ ಅಡಿಯಲ್ಲಿ 31-12-2024ರವರೆಗೆ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ-ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243