ದಿನದ ಸುದ್ದಿ

ಚೈತ್ರಾ ಕುಂದಾಪುರಗೆ ಛೀಮಾರಿ ಹಾಕಿದ ಜಡ್ಜ್..!?

Published

on

ಸುದ್ದಿದಿನ ಡೆಸ್ಕ್ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚೈತ್ರಾ ಕುಂದಾಪುರ ಮತ್ತು ತಂಡದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನವೆಂಬರ್ 19ರವರೆಗೆ ಚೈತ್ರಾ ಮತ್ತು ತಂಡದ ನ್ಯಾಯಾಂಗ ಬಂಧನದ ವಿಸ್ತರಣೆಯನ್ನು ಮಾಡಿ ದ‌.ಕ ಜಿಲ್ಲೆಯ ಸುಳ್ಯ ನ್ಯಾಯಾಲಯ ಆದೇಶ ಹೊರಡಿಸಿದೆ.ಇಂದು ಚೈತ್ರಾ ಮತ್ತು ತಂಡವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರ ಜೊತೆಗೆ ಮಂಗಳೂರು ಜೈಲು ಅಧೀಕ್ಷಕರು ಮತ್ತು ಚಿಕಿತ್ಸೆ ನೀಡಿದ ವೈದ್ಯರು ಹಾಜರಾಗಿದ್ದರು.

ಅನಾರೋಗ್ಯದ ನೆಪವೊಡ್ಡಿ ಕಳೆದ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾಗೆ ಇಂದು ಕಡ್ಡಾಯವಾಗಿ ಹಾಜರುಪಡಿಸಲು ಸೂಚಿಸಿದ್ದರು ನ್ಯಾಯಾಧೀಶರು.‌ಚೈತ್ರಾ ಆರೋಗ್ಯದಲ್ಲಿ ಸಮಸ್ಯೆಯಿಲ್ಲ ಎಂದು ವೈದ್ಯರಿಂದ ನ್ಯಾಯಾಲಯಕ್ಕೆ ವರದಿ‌ ನೀಡಿದ್ದು, ಹೀಗಾಗಿ ಕೋರ್ಟ್ ಗೆ ಅಗೌರವ ಸೂಚಿಸಿದ ಹಿನ್ನೆಲೆಯಲ್ಲಿ ಚೈತ್ರಾಗೆ ಪಾಠ ಮಾಡಿದ ಜಡ್ಜ್ ಅವರು ಅನಾರೋಗ್ಯದ ಸುಳ್ಳು ನೆಪಹೇಳಿ ನ್ಯಾಯಾಲಯಕ್ಕೆ ಹಾಜರಾಗದ್ದಕ್ಕೆ ಚೈತ್ರಾಗೆ ಛೀಮಾರಿ ಹಾಕಿದರು. ಅಲ್ಲದೇ ನ್ಯಾಯಾಂಗ ಬಂಧನ ಅವಧಿ ನವೆಂಬರ್ 19ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version