ಸಿನಿ ಸುದ್ದಿ
‘ಹಸುವಿನ ಹಾಲು ಕರೆದ’ ಡಿ ಬಾಸ್, ಗ್ರಾಮದ ಜನತೆಯ ಖುಷಿಗೆ ಕಾರಣವಾದ್ರು..!
ಸುದ್ದಿದಿನ, ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಪರ ಪ್ರಚಾರಕ್ಕೆ ಇಂದು (ಗುರುವಾರ) ಕೆ.ಆರ್.ಪೇಟೆ ತಾಲೂಕಿನ ಸೋಮನ ಹಳ್ಳಿಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹಸುವಿನ ಹಾಲು ಕರೆದು ಅಭಿಮಾನಿಗಳಿಗೆ ಸಂತಸ ಮೂಡಿಸಿದರು.
ದರ್ಶನ್ ಮತ್ತು ಯಶ್ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವು ಜೋಡೆತ್ತುಗಳಲ್ಲ, ರಾತ್ರಿ ಬಂದು ಮೇದು ಹೋಗುವ ಕಳ್ಳೆತ್ತುಗಳು ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಕೂಡ ಅಪ್ಪನ ಮಾತಿಗೆ ತಕ್ಕನಾಗೆ ಪ್ರಚಾರದ ವೇಳೆ ಇವರಿಬ್ಬರ ವೈಯಕ್ತಿಕ ವಿಷಯವಾಗಿ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ರೈತರ ಕಷ್ಟಗಳ ಬಗ್ಗೆ ಅರಿವಿರುವ ದರ್ಶನ್ ಸೋಮನಹಳ್ಳಿಯ ಗ್ರಾಮದ ಕುಮಾರ್ ಎಂಬುವವರ ಹಸುವಿನ ಹಾಲುಕರೆದು ನಾನೂ ಕೂಡ ರೈತನೇ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಸಿನೆಮಾಗೆ ಬರುವುದುಕ್ಕಿಂತ ಮುಂಚೆ ದರ್ಶನ್ ಹೈನುಗಾರಿಕೆ ಮಾಡುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ. ಹಾಗೇ ದರ್ಶನ್ ಪಾರ್ಮ್ ಹೌಸ್ ನಲ್ಲಿ ಇಂದಿಗೂ ಹಲವು ಹಸುಗಳು ಇವೆ.