ದಿನದ ಸುದ್ದಿ

ಚಂದ್ರಯಾನ-3 ಕಕ್ಷೆ ಇಳಿಕೆ ಪ್ರಕ್ರಿಯೆ ಪೂರ್ಣ ; ಗಗನನೌಕೆಯಿಂದ ಲ್ಯಾಂಡರ್ ಮಾಡ್ಯೂಲ್ ನಾಳೆ ಪ್ರತ್ಯೇಕ

Published

on

ಸುದ್ದಿದಿನ ಡೆಸ್ಕ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ, ಉಡಾವಣೆ ಮಾಡಿರುವ ಚಂದ್ರಯಾನ-3 ಗಗನನೌಕೆ, ಚಂದ್ರನ ಸಮೀಪಕ್ಕೆ ಮತ್ತಷ್ಟು ತಲುಪಿದ್ದು, ನಿರೀಕ್ಷೆಯಂತೆ 153 ಕಿಲೋಮೀಟರ್ ಮತ್ತು 163 ಕಿಲೋಮೀಟರ್ ವ್ಯಾಪ್ತಿಯ ಕಕ್ಷೆಯಲ್ಲಿ ನಿಯೋಜನೆಗೊಂಡಿದೆ.

ಇದರೊಂದಿಗೆ ಚಂದ್ರನ ಮೇಲೆ ಕಕ್ಷೆ ಇಳಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಲ್ಯಾಂಡರ್ ಮಾಡ್ಯುಲ್ ಪ್ರತ್ಯೇಕಗೊಳ್ಳಲಿದೆ. ಚಂದ್ರನ ಮೇಲ್ಮೈನಲ್ಲಿ ಇದೇ 23 ರಂದು ಸಂಜೆ 5.47ಕ್ಕೆ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ಇಸ್ರೋ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version