ರಾಜಕೀಯ
ಸೆಪ್ಟಂಬರ್ 3 ಕ್ಕೆ ಬೇರೊಬ್ಬರು ಸಿಎಂ ಆಗೋಕೆ ರೆಡಿ ವಿಚಾರ ; ಖಾರವಾಗಿ ಪ್ರತಿಕ್ರಿಯಿಸಿದ ಎಚ್.ಡಿ.ಕೆ
ಸುದ್ದಿದಿನ,ಬೆಂಗಳೂರು : ನಾನು ಎಷ್ಟು ದಿನ ಸಿಎಂ ಆಗಿ ಇರ್ತೆನೆ ಅಂತ ಮುಖ್ಯ ಅಲ್ಲ, ಮಾಧ್ಯಮದ ಮಿತ್ರರೂ ಕೂಡ ಈ ವಿಚಾರವನ್ನೆರ ತೋರಿಸ್ತಾ ಇದ್ರು, ಸೆಪ್ಟೆಂಬರ್ 3ರಂದು ಬೇರೊಬ್ಬರು ಸಿಎಂ ಆಗೋಕೆ ರೆಡಿ ಯಾಗಿದ್ದಾರೆ ಅಂತ ಇದರ ಬಗ್ಗೆ ನಾನು ತಲೆ ಕಡೆಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನಡೆಸಿದರು.
ನಾನು ಏನು ಮಾಡ್ಬೇಕು ಅಂತ ಇದ್ದೇನೆ ಆ ಎಲ್ಲಾ ಕೆಲಸಗಳನ್ನು ಮಾಡ್ತೇನೆ. ರಾಜ್ಯದ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಅಂತ ಒಂದು ನಿಲುವು ಇಟ್ಟುಕೊಂಡಿದ್ದೇನೆ,ಅದರ ಬಗ್ಗೆ ಗಮನ ಹರಿಸ್ತಾ ಇದ್ದೇನೆ,ಕುರ್ಚಿ ಉಳಿಸಿಕೊಳ್ಳಲು ಯಾವುದೇ ಸರ್ಕಸ್ ನಾನು ಮಾಡಲ್ಲ ಎಂದು ಖಾರವಾಗಿ ನುಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401