ದಿನದ ಸುದ್ದಿ
ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದ ರೈತರು..!
ಸುದ್ದಿದಿನ, ಡೆಸ್ಕ್ : ಮುಖ್ಯಮಂತ್ರಿಗೆ ರಕ್ತದ ಮೂಲಕ ಪತ್ರ ಬರೆದಿರುವ ರೈತರು ಮದಲೂರು ಕೆರೆಗೆ ಹೇಮವತಿ ಜಲಾಶಯದಿಂದ ನೀರು ಹರಿಸಲು ಒತ್ತಾಯ ಮಾಡಿದ್ದಾರೆ.
ಕೆರೆಗೆ ನೀರು ಹರಿಸಲು ಕಾಲುವೆ ನಿರ್ಮಾಣವಾಗಿದ್ದು, 1500 ಹೆಕ್ಟೆರ್ ಗೂ ಅಧಿಕ ವ್ಯಾಪ್ತಿಯ ಮದಲೂರು ಕೆರೆಗೆ ನೀರು ಹರಿಯುವದರಿಂದ ಎಂಟತ್ತು ಕೆರೆಗಳು ತುಂಬಲಿವೆ ಎಂದು ಮೊದಲ ಹಂತದಲ್ಲಿ ರಕ್ತದಲ್ಲಿ ಪತ್ರ ಬರೆದು ಹೋರಾಟಕ್ಕಿಳಿದಿದ್ದಾರೆ ರೈತರು.
ಹೋರಾಟ ತೀವ್ರಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಲು ಸಿ.ಎಂ.ಗೆ ರೈತರು ಆಗ್ರಹಿಸಿದ್ದಾರೆ.