ರಾಜಕೀಯ
ಜಾತಿ ರಾಜಕೀಯ ಮಾಡೋನಲ್ಲ ನಾನು : ಎಚ್.ಡಿ.ಕೆ
ಸುದ್ದಿದಿನ,ಬೆಂಗಳೂರು : ಸರ್ಕಾರ ಎಷ್ಟು ದಿನ ಇರುತ್ತದೆ ಎನ್ನುವ ಮಾತ ನ್ನು ನಾನು ಕೇಳೋದಿಲ್ಲ.ಯಾವುದೇ ಅಧಿಕಾರಿಗಳು ಅಂದುಕೊಂಡರೆ ಅವರಿಗೆ ಚಾಟಿ ಬೀಸುವ ಶಕ್ತಿ ನನಗಿದೆ.ಹಿಂದಿನ ರೀತಿಯಲ್ಲಿ ಇನ್ನೂ ನಡೆದುಕೊಂಡರೆ ನಾನು ಬಿಡಲ್ಲ.ಜಾತಿ ಹೆಸರಿನಲ್ಲಿ ರಾಜಕೀಯ ನಾನು ಮಾಡಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಕಿಡಿಕಾರಿದರು.
ಯಾವ ಅಧಿಕಾರಿ ಹಿಂದೆ ಎಲ್ಲಿ ಇದ್ರೋ ಈಗಲೂ ಅಲ್ಲೆ ಇದ್ದಾರೆ.ನೀವು ಅಂದುಕೊಂಡಿದ್ದೀರಿ ಈ ಸಿಎಂ ಗೆ ಏನೂ ಗೊತ್ತಾಗಲ್ಲ ಅಂತ.ನನಗೆ ನೀವು ಏನೇನೇ ಮಾಡ್ತಾ ಇದ್ದೀರಾ ಎಲ್ಲವೂ ನಂಗೆ ಗೊತ್ತಾಗುತ್ತದೆ.ಹಿಂದೆ ಹೇಗೆ ಇದ್ರಿ ನೀವು ಅದು ನಂಗೆ ಸಂಬಂಧ ಇಲ್ಲ.ಯಾರ ಗುಂಪಲ್ಲಿ ನೀವು ಹಿಂದೆ ಇದ್ರಿ ಅದೂ ಬೇಡ ನಂಗೆ, ಅದರೆ ಜನರಿಗೆ ಉಪಯೋಗವಾಗಬೇಕೋ ಹಾಗೆ ಕೆಲಸ ಮಾಡಬೇಕು ಅಷ್ಟೇ.
ಸುದ್ದಿದಿನ.ಕಾಂ|ವಾಟ್ಸಾಪ್|9986715401