ರಾಜಕೀಯ
ಸಚಿವ ಸ್ಥಾನಕ್ಕೆ ರಾಜೀನಾಮೆ : ಕಾಂಗ್ರಸ್ ನಲ್ಲಿ ಮತ್ತೆ ಬುಗಿಲೆದ್ದ ಅಸಮಾಧಾನ
ಸುದ್ದಿದಿನ ಡೆಸ್ಕ್ : ಕಾಂಗ್ರೆಸ್ ನಲ್ಲಿ ಅಸಮಾಧಾನ ಬುಗಿಲೆದ್ದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಸಚಿವರು ವಿರೋಧವ್ಯಕ್ತ ಪಡಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಹಲವು ಸಚಿವರ ನಕಾರ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಆರು ಸಚಿವರ ರಾಜೀನಾಮೆಗೆ ಸೂಚಿಸಲಾಗಿತ್ತು. ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಲು ಆರು ಸಚಿವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್ 9 ಹಿರಿಯ ಶಾಸಕರನ್ನು ಸಂಪುಟ ಸೇರಿಸಲು ನಿರ್ಧಾರ ಮಾಡಿದೆ.
ಆರು ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದ್ರೆ ಮಾತ್ರ 9 ಶಾಸಕರ ಸಂಪುಟ ಸೇರ್ಪಡೆ ಸಾಧ್ಯವಿದ್ದು, 5 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲು ನಿರ್ಧಾರ ಮಾಡಲಾಗಿದೆ. ಉಳಿದ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ಹುದ್ದೆ ನೀಡಲಾಗಿವುದು.
ಸುದ್ದಿದಿನ.ಕಾಂ|ವಾಟ್ಸಾಪ್ |9986715401