ಲೈಫ್ ಸ್ಟೈಲ್

ಉತ್ತರ ಕರ್ನಾಟಕದ ಸ್ಪೆಷಲ್ ‘ಬದನೇಕಾಯಿ ಎಣ್ಣೆಗಾಯಿ’ ಮಾಡೋದು ಹೀಗೆ ನೋಡಿ..!

Published

on

  • ಶಶಿಕಲಾ ‌ಸುನೀಲ್

ಬೇಕಾಗುವ ಸಾಮಗ್ರಿಗಳು

  • ಗುಂಡು ಬದನೇಕಾಯಿ – 8
  • ಈರುಳ್ಳಿ – 2 ಮೀಡಿಯಂ ಗಾತ್ರ
  • ಹಸಿಮೆಣಸಿನಕಾಯಿ – 4
  • ಒಣ ಕೊಬ್ಬರಿ – 1 ಬಟ್ಟಲು
  • ಕಡಲೆಕಾಯಿ ಬೀಜ – ಅರ್ಧ ಬಟ್ಟಲು
  • ಬೆಳ್ಳುಳ್ಳಿ -1 ದೊಡ್ಡ ಗಾತ್ರ
  • ಎಳ್ಳು – 4 ಸ್ಪೂನ್
  • ಸಾಂಬಾರ್ ಪುಡಿ – 5 ಸ್ಪೂನ್
  • ಬೆಲ್ಲ – ನಿಂಬೆ ಗಾತ್ರ
  • ಹುಣಸೆಹಣ್ಣು – ನಿಂಬೆ ಗಾತ್ರ
  • ಕರಿಬೇವು, ಕೊತ್ತಂಬರಿ
  • ಸಾಸಿವೆ
  • ಉಪ್ಪು ರುಚಿಗೆ
  • ಎಣ್ಣೆ

ಮಾಡುವ ವಿಧಾನ

ಮಿಕ್ಸಿಯಲ್ಲಿ 1 ಈರುಳ್ಳಿ, ಬೆಳ್ಳುಳ್ಳಿ, ಬೆಲ್ಲ, ಹುಣಸೆಹಣ್ಣು, ಒಣಕೊಬ್ಬರಿ, ಹುರಿದ ಕಡಲೆ ಕಾಯಿಬೀಜ,ಹುರಿದ ಎಳ್ಳು, ಸಾಂಬಾರ್ ಪುಡಿ ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿ. ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ರುಚಿಗೆ ತಕ್ಕಷ್ಟು ಉಪ್ಪುಹಾಕಿ mix ಮಾಡಿ.
ಬದನೇಕಾಯಿಯನ್ನು ‘×’ಆಕಾರದಲ್ಲಿ ಕಟ್ ಮಾಡಿ ಅದಕ್ಕೆ ಮಿಶ್ರಣವನ್ನು ತುಂಬಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿದ ನಂತರ ಬದನೇಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ನೆನಪಿರಲಿ ಈ ಹಂತದವರೆಗೂ ನೀರನ್ನು ಸೇರಿಸಬೇಡಿ. ಮಿಶ್ರಣ ಸ್ವಲ್ಪ ಮಿಕ್ಕಿದ್ದಲ್ಲಿ ಅದನ್ನೂ ಸೇರಿಸಿ ತಳ ಹಿಡಿಯದ ಹಾಗೆ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ಕೊತ್ತಂಬರಿಸೊಪ್ಪು ಹಾಕಿ ಅಕ್ಕಿರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಪುಲ್ಕದೊಂದಿಗೆ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version