ದಿನದ ಸುದ್ದಿ
ಕಾಲೇಜು ರಂಗೋತ್ಸವ-ಯುವರಂಗ-ನಾಟಕೋತ್ಸವ
ಸುದ್ದಿದಿನ,ಶಿವಮೊಗ್ಗ : ರಂಗಾಯಣ, ಶಿವಮೊಗ್ಗವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕಷಿಸುವ ಕಾರ್ಯಕ್ರಮಗಳ ಭಾಗವಾಗಿ ಕಾಲೇಜು ರಂಗೋತ್ಸವ ಯುವರಂಗ-2021-22 ಆಯೋಜಿಸಿ ಐದು ಜಿಲ್ಲೆಗಳ ಗುರಿತಿಸಲಾದ ಕಾಲೇಜುಗಳಲ್ಲಿ ರಂಗತರಬೇತಿ ಶಿಬಿರ ನಡೆಸಲಾಗಿದ್ದು, ಇದೀಗ ಫೆ.18 ರಿಂದ 22 ರವರೆಗೆ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಅಂತಿಮ ಹಂತದ ವಿಭಾಗ ಮಟ್ಟದ ಕಾಲೇಜು ರಂಗೋತ್ಸವ ನಡೆಯಲಿದೆ.
ಫೆ.18 ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ ನವೀನ್ ತಿಪಟೂರು ನಿರ್ದೇಶನದ ‘ಒಡಲಾಳ, ಫೆ.19 ರಂದು ಚಿತ್ರದುರ್ಗ ಜಿಲ್ಲೆಯ ಹಿರಯೂರಿನ ಜ್ಞಾನಭಾರತಿ ಮಹಾವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ, ಇನ್ಫೆಂಟ್ ವಿನಯ್ ನಿರ್ದೇಶನದ ‘ಆ ಕರಾಳ ರಾತ್ರಿ’, ಫೆ.20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ, ಶ್ರೀಕಾಂತ್ ಕುಮಟ ನಿರ್ದೇಶನದ ‘ತುರುಬ ಕಟ್ಟುವ ಹದನ’, ಫೆ.21 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ ಪ್ರತಾಪ್.ಜಿ ನಿರ್ದೇಶನದ ‘ಅಶ್ವಪರ್ವ’ ಹಾಗೂ ಫೆ.22 ರಂದು ಬೆಂಗಳೂರು ನಗರ ಜಿಲ್ಲೆಯ ಸುರಾನ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ, ಜೋಸೆಫ್ ಜಾನ್ ನಿರ್ದೇಶನದ ‘ಈ ಪಗರಣ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಫೆ.18 ರಂದು ಸಂಜೆ 6 ಗಂಟೆಗೆ ಕಾಲೇಜು ರಂಗೋತ್ಸವ ಯುವರಂಗ-2021-22 ಉದ್ಘಾಟನೆಯನ್ನು ಕನ್ನಡ ಸಂಸ್ಕøತಿ ಮತ್ತು ಇಂಧನ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ನೆರವೇರಿಸವರು. ಯುವರಂಗ ಜಿಲ್ಲಾ ಕಾರ್ಯಕ್ರಮಗಳ ಛಾಯಾಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಬೆಂಗಳೂರು ಕೇಂದ್ರದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕಿ ವೀಣಾರ್ಶ ಬೂಸನೂರುಮಠ ನೆರವೇರಿಸುವರು.
ಫೆ.22 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ನೆರವೇರಿಸುವರು. ಯುವರಂಗ-ಪಯಣದ ಸ್ಮರಣಸಂಚಿಕೆಯನ್ನು ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸುವರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ರಂಗಸಮಾಜದ ಸದಸ್ಯರುಗಳಾದ ಜೀವನರಾಂ ಸುಳ್ಯ, ಪ್ರಭುದೇವ ಕಪ್ಪಗಲ್ಲು, ಶ್ರೀಧರ ಹೆಗಡೆ, ಸಿದ್ದರಾಮ ಹಿಪ್ಪರಗಿ, ಆರ್.ಎಸ್.ಹಾಲಸ್ವಾಮಿ, ಬಿ.ವಿ.ರಾಜರಾಂ, ಶಿವೇಶ್ವರಗೌಡ, ಹೆಲನ್, ಪ್ರವೀಣ್ ಹಾಲ್ಮೂತ್ತೂರು, ಡಾ.ಶೈಲಜಾ.ಎ.ಸಿ ಪಾಲ್ಗೊಳ್ಳುವರು. ರಂಗಾಯಣದ ನಿರ್ದೆಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243