ಲೈಫ್ ಸ್ಟೈಲ್
ಕೊಂಚ್ ರಿಮೂವಲ್ | ಕಿವಿ ಹರಿದು ಹೊಲೆಯುವ ಹೂಸ ಟ್ರೆಂಡ್..!
- ಚಿತ್ರಶ್ರೀ ಹರ್ಷ
ಫ್ಯಾಷನ್ ಗೋಲ ತಿರುಗಿದಂತೆಲ್ಲಾ ಒಂದೊಂದು ಹೊಸ ಟ್ರೆಂಡ್ ಸೃಷ್ಟಿ ಆಗುತ್ತಲೇ ಇದೆ.ದಿನೇ ದಿನೇ ಹೆಚ್ಚುತ್ತಿರುವ ಫ್ಯಾಷನ್ ಕ್ರೇಜ್, ಸ್ಟೈಲ್ ಸ್ಟೇಟ್ ಮೆಂಟ್ ನ ಹ್ಯಾಂಗೋವರ್, “ಫ್ಯಾಷನ್ ” ಅಂಗಳದಲ್ಲಿ ಭಾರೀ ಕ್ರಾಂತಿ ಹುಟ್ಟು ಹಾಕಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/BSbYlplghre/?igshid=av42bccf90qw
ಸ್ತ್ರೀ – ಪುರುಷರು ಕಿವಿಗೆ ಓಲೆ ಹಾಕುವುದು ಸಹಜ. ಒಂದಲ್ಲ ಎರಡೆಲ್ಲ ಕಿವಿ ತುಂಬ ರಂಧ್ರಗೊಳಿಸಿ ಓಲೆ ಧರಿಸುವುದೂ ಈಗ ಸಾಮಾನ್ಯ. ಆದರೆ ಕಿವಿಯನ್ನು ಹರಿದು, ದೊಡ್ಡ ತೂತು ಮಾಡಿ, ಹೊಲಿಗೆಹಾಕುವ ಬಾಡಿಮಾಡಿಫಿಕೇಷನ್ ಟ್ರೆಂಡ್ ಈಗ ಚಾಲ್ತಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ 2019 ರ ಮಾರ್ಚ್ ನಿಂದ ಚಾಲ್ತಿಯಲ್ಲಿರುವ ಈ ವಿಚಿತ್ರ ಅಸಹಜ ಟ್ರೆಂಡ್ ಯುವಪೀಳಿಗೆಯನ್ನು ಆಕರ್ಷಿಸುತ್ತಿರುವುದು ಆಶ್ಚರ್ಯಕರವಾಗಿದೆ. ಸದ್ಯ ಭಾರತಕ್ಕೆ ಇನ್ನು ಕಾಲಿಡದ ಈ ಕಿವಿ ತೂತು ಮಾಡುವ ಫ್ಯಾಷನ್ ಪಾಶ್ಚಾತ್ಯ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಇನ್ನು ವೈದ್ಯಕೀಯ ರಂಗದಲ್ಲಿ ಭಾರೀ ಚರ್ಚೆ ಗೆ ಎಡೆಮಾಡಿರುವ ಈ #conchremoval ಕೊಂಚ್ ರಿಮೂವಲ್ ಟ್ರೆಂಡ್, ಇಂಸ್ಟಾಗ್ರಾಂನಲ್ಲಿ ಸಖತ್ ವೈರಲ್ ಆಗಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/B7BKFQ1AHmV/?igshid=1j4ycpyqq0hdw
ಕೇವಲ ಗಂಡು ಹೈಕಳಷ್ಟೇ ಅಲ್ಲದೆ, ಹೆಂಗಳೆಯರೂ ಈ ವಿಚಿತ್ರ ಅಸಹಜ ಟ್ರೆಂಡ್ ಗೆ ಮಾರುಹೋಗುತ್ತಿರುವುದು ಫ್ಯಾಷನ್ ಲೋಕದಲ್ಲಿ ಕೌತುಕ ಸೃಷ್ಟಿಸಿದೆ. ಇದರ ಪರ – ವಿರೋಧ ಚರ್ಚೆ ನಡೆಯುತ್ತಿದ್ದು, ಸ್ಟೈಲ್ ಹೆಸರಲ್ಲಿ ಇನ್ನೇನ್ನೇನು ಹರಿದು ಹೊಲಿಗೆಹಾಕುವ ಪರಿ ಹುಟ್ಟಿಕೊಳ್ಳುತ್ತದೆಯೋ ಕಾದು ನೋಡಬೇಕಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/BrADALLnUY5/?igshid=11yhgaidepc1c
ಈ ರೀತಿ ಕಿವಿ ಹರಿದು ಹೊಲಿಗೆಹಾಕುವುದರಿಂದ ಕಿವಿಯನ್ನು ಶ್ರಾವಣ ಶಕ್ತಿ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ವಾದಿಸುವ ,ಬಾಡಿ ಮಾಡಿಫಿಕೇಷನ್ ಗೀಳು ಅಂಟಿಸಿಕೊಂಡಿರುವ ಫ್ಯಾಷನ್ ಪ್ರಿಯರು, ಈ ಟ್ರೆಂಡ್ ಗೆ ಫುಲ್ ಫಿದಾ ಆಗಿದ್ದಾರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/BqXIo85hbH8/?igshid=196b7e4s3koyn
ಸುದ್ದಿದಿನ.ಕಾಂ|ವಾಟ್ಸಾಪ್|9980346243