ದಿನದ ಸುದ್ದಿ
ಬಿಡಿಎ ಅಧ್ಯಕ್ಷ ನೇಮಕ ವಿಚಾರ | ಮೊದಲ ಪಟ್ಟಿಯಲ್ಲಿ ಬಂದ್ರೆ ಏನು, ಎರಡನೇ ಪಟ್ಟಿಯಲ್ಲಿ ಬಂದ್ರೆ ಏನು ವ್ಯತ್ಯಾಸ ಇಲ್ಲ : ಶಾಸಕ ಸೋಮಶೇಖರ್
ಸುದ್ದಿದಿನ, ಬೆಂಗಳೂರು : ಬಿಡಿಎ ಅಧ್ಯಕ್ಷ ನೇಮಕ ವಿಚಾರ ಸಿಎಂ ಈಗ ನಿನ್ನ ಅಧ್ಯಕ್ಷ ಸ್ಥಾನ ಕ್ಲಿಯರ್ ಮಾಡಿ ಎಸಿಎಸ್ ಗೆ ಕಳುಹಿಸಿದ್ದೇನೆ ಅಂತ ಹೇಳಿದ್ದಾರೆ. ಯಾಕೆ ಮೊದಲ ಸಲ ತಡೆ ಹಿಡಿದ್ರು ಗೊತ್ತಿಲ್ಲ. ಆದರೆ ಮೊದಲ ಪಟ್ಟಿಯಲ್ಲಿ ಬಂದ್ರೆ ಏನು, ಎರಡನೇ ಪಟ್ಟಿಯಲ್ಲಿ ಬಂದ್ರೆ ಏನು ವ್ಯತ್ಯಾಸ ಇಲ್ಲ.ಈಗ ಸಿಎಂ ನಿನ್ನ ಅಧ್ಯಕ್ಷ ಸ್ಥಾನ ಕ್ಲಿಯರ್ ಮಾಡಿದ್ದೀನಿ ಅಂತ ಹೇಳಿದ್ದಾರೆ ಎಂದುಸಿಎಂ ಭೇಟಿ ಬಳಿಕ ಶಾಸಕ ಸೋಮಶೇಖರ್ ಹೇಳಿದರು.
ಹ್ಯಾರಿಸ್, ಸುಬ್ಬಾರೆಡ್ಡಿ, ನನ್ನ ಅಧ್ಯಕ್ಷ ಸ್ಥಾನ ಸಿಎಂ ಕ್ಲಿಯರ್ ಮಾಡಿದ್ದಾರೆ.ಆದೇಶ ಬಂದ ಕೂಡಲೇ ನಾನು ಅಧಿಕಾರವಹಿಸಿಕೊಳ್ಳುತ್ತೇನೆ. ಇವಾಗ ಕೊಟ್ರೆ ಇವಾಗಲೇ ಸ್ವೀಕಾರ ಮಾಡುತ್ತೇನೆ. ನನಗೆ ರಾಹುಕಾಲ , ಗುಳಿಕಕಾಲ ಅಂತೇನು ಇಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401