ರಾಜಕೀಯ
ಅತೃಪ್ತ ಶಾಸಕರು ಸಿದ್ದು ಭೇಟಿ ಮಾಡಿದ್ದಾದ್ರೂ ಏಕೆ.? ಇಲ್ಲಿದೆ ಅದರ ಕಂಪ್ಲೀಟ್ ಡೀಟೆಲ್ಸ್ ಓದಿ..!
ಸುದ್ದಿದಿನ, ಬೆಂಗಳೂರು : ಎಂಟಿಬಿ ನಾಗರಾಜ್, ಡಾ.ಸುಧಾಕರ, ಜೊತೆಗೆ ಸಚಿವ ಜಮೀರ್ ಅಹಮ್ಮದ್ ಅವರು ಸಿದ್ದರಾಮಯ್ಯರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿಯಾದರು. ನಂತರ ಸಿದ್ದು ನಿವಾಸದಿಂದ ಹೊರಬಂದ ಎಂಟಿಬಿ ನಾಗರಾಜ್ ಅವರು”ಪಕ್ಷದವರು ಯಾವ ಭರವಸೆಯನ್ನು ನನಗೆ ನೀಡಿಲ್ಲ. ಹೈಕಮಾಂಡ್ ಇದೆ ಮಾತಾಡೋಣ ಅಂದಿದ್ದಾರೆ. ನನಗೆ ಅಸಮಧಾನ ಇದ್ದೇ ಇದೆ. ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ.ತಾರತಮ್ಯ ಮಾಡಲಾಗ್ತಿದೆ. ಎಲ್ಲಿಯೂ ಹೋಗಲ್ಲ.ಕಾದು ನೋಡೋಣ. ಹೈಕಮಾಂಡ್ ಗೊತ್ತಲ್ಲಾ ? ಅಷ್ಟು ಸುಲಭವಾಗಿ ಒಪ್ಪುತ್ತಾ ? ಬೇಸರದಿಂದಲೇ ಸಿದ್ದರಾಮಯ್ಯ ನಿವಾಸದಿಂದ ಕಾಲ್ಕಿತ್ತರು. ಹಾಗೇ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗ್ತಿಲ್ಲ, ಅನುದಾನ ಸಿಗ್ತಿಲ್ಲ. ಈ ಬಗ್ಗೆ ಬೇಸರ ಇತ್ತು. ನನಗೆ ಮಂತ್ರಿ ಸ್ಥಾನ ವಿಚಾರ, ನೋಡೋಣ ಅಂದಿದ್ದಾರೆ. ನೋಡೋಣ ಎಂದು ಬೇಸರ ವ್ಯಕ್ತ ಪಡಿಸಿದರು.
ಶಾಸಕಾಂಗ ಸಭೆಗೂ ಮುನ್ನ ಅತೃಪ್ತರನ್ನ ಕರೆದು ಮಾತನಾಡಿಸಿದ ಮಾಜಿ ಸಿಎಂ ಸಿದ್ದು, ಕೆಲ ದಿನಗಳ ಹಿಂದೆ ವೇಣುಗೋಪಾಲ ಜೊತೆ ಚರ್ಚೆ ಮಾಡಿದ್ದರು ಎಂಟಿಬಿ ನಾಗರಾಜ್. ನಿಮ್ಮ ಸಮಸ್ಯೆ ಏನೇ ಇದ್ರೂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಎಂದು ಸೂಚಿಸಿದ್ದರು ವೇಣುಗೋಪಾಲ ಅವರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್. ಸಂಜೆ ಎಲ್ಲಿ ಸಭೆಗೆ ಗೈರಾಗಿ ಬಿಟ್ಟಾರು ಅನ್ನೋ ಭೀತಿಯಿಂದ ಕಾವೇರಿಗೆ ಕರೆಸಿಕೊಂಡು ಮಾತನಾಡಿಸಿದರು ಸಿದ್ದು.
ನಾಗರಾಜ್ ಡಿಕೆಶಿ ಭೇಟಿ
ನಂತರ ಡಿ.ಕೆ.ಶಿ ಭೇಟಿಯಾಗಿ ಚರ್ಚೆ ನಡೆಸಿ ಹೊರಬಂದ ಎಂ.ಟಿ ಬಿ ನಾಗರಾಜ್ ಅವರು ನಾನು ಸಚಿವ ಸ್ಥಾನ ದ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ. ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಬಳಿ ಚರ್ಚೆ ಆಗಿದೆ. ನಮ್ಮಲ್ಲಿ ಅನುದಾನ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನ ಇದೆ. ಸಚಿವ ಸ್ಥಾನ ದ ಬಗ್ಗೆ ಅಸಮಾಧಾನ ಇಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ವೇಣುಗೋಪಾಲ್ ಸಿದ್ದರಾಮಯ್ಯ ಭೇಟಿ ಮಾಡು ಅಂತ ಹೇಳಿದ್ರು ಭೇಟಿ ಮಾಡಿದೆ ಅಷ್ಟೆ ಎಂದರು.
ಸಿದ್ದು ಭೇಟಿಯಾದ ರೇವಣ್ಣ
ಸಿದ್ದರಾಮಯ್ಯ ನಿವಾಸ ಕಾವೇರಿಗೆ ಆಗಮಿಸಿದ ಚಿವ ಹೆಚ್ ಡಿ ರೇವಣ್ಣ ಅವರ ಭೇಟಿ ಕುತೂಹಲ ಮೂಡಿಸಿತು. ಸಿದ್ದರಾಮಯ್ಯ ಭೇಟಿ
ಡಿ ಬಳಿಕ ಎಚ್ ಡಿ ರೇವಣ್ಣ ಅವರು “ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕರ್ಟಸಿ ವಿಸಿಟ್ ಅಷ್ಟೇ. ರಾಜಕೀಯ ಎಲ್ಲ ಸಿಎಂ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ. ಆಸ್ಪತ್ರೆಯಿಂದ ಡಿಸ್ಚರ್ಜ್ ಆದ ಬಳಿಕ ಡಿಕೆಶಿ ಭೇಟಿ ಮಾಡಿರಲಿಲ್ಲ.ಹೀಗಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಕಾಂಗ್ರೆಸ್ ಅತೃಪ್ತ ಶಾಸಕರ ಸಿಎಂ ನಡೆ ವಿರುದ್ಧ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಅಸಮಾಧಾನ ವೂ ಇಲ್ಲ ಎಲ್ಲ ನಡೆಯುತ್ತೆ ಬಿಡಿ ಎಂದರು”.
ವಿಧಾನ ಪರಿಷತ್ ಗೆ ರಮೇಶ್ ಗೌಡ ಅಭ್ಯರ್ಥಿ ಮಾಡಿದ್ದ ವಿಚಾರವದು ಪಕ್ಷದ ನಿರ್ಧಾರ ಅಷ್ಟೇ. ಮಧು ಬಂಗಾರಪ್ಪ ಅಭ್ಯರ್ಥಿ ಮಾಡಬೇಕು ಅಂತ ನಿರ್ಧಾರ ಆಗಿತ್ತು.ಆದ್ರೆ ಹಿಂಬಾಗಿಲಿನ ರಾಜಕಾರಣ ಮಾಡಲ್ಲ ಅಂತ ತಿರಸ್ಕಾರ ಮಾಡಿದ್ರು. ಹೀಗಾಗಿ ಕೊನೆಯ ಕ್ಷಣದಲ್ಲಿ ರಮೇಶ್ ಗೌಡ ಅವರನ್ನ ಕಣಕ್ಕೆ ಇಳಿಸಿದ್ವಿ ಎಂದರು.
ಪರಿಷತ್ ಚುನಾವಣೆ ಮೂರು ಅಭ್ಯರ್ಥಿಗಳು ಅವಿರೋಧ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ನಿಂದ ನಸೀರ್ ಅಹ್ಮದ್, ಎಂಸಿ ವೇಣುಗೋಪಾಲ್, ಜೆಡಿಎಸ್ ನಿಂದ ಹೆಚ್ ಎಂ ರಮೇಶ್ ಗೌಡ ಅವರು ಅವಿರೋಧವಾಗಿ ಆಯ್ಕೆಯಾದವರು ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401