ದಿನದ ಸುದ್ದಿ

ಕೊರೋನಾ ವಾರಿಯರ್ಸ್ ಕಾರ್ಯ ಶ್ಲಾಘನೀಯ ಎಂದ ಶಾಸಕ ದೇವಾನಂದ ಚವ್ಹಾಣ

Published

on

ಸುದ್ದಿದಿನ,ವಿಜಯಪುರ: ಜಿಲ್ಲೆಯ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ಜುಮನಾಳ, ಹೆಗಡಿಹಾಳ, ಹೊನ್ನಟಗಿ, ಕುಮಟಗಿ, ಹಡಗಲಿ, ಶಿವಣಗಿ, ಮದಭಾವಿ ಹಾಗೂ ಹಿಟ್ಟಿನಹಳ್ಳಿ ಸೇರಿದಂತೆ 8 ಗ್ರಾಮಗಳ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಯನ್ನು ನಡೆಸಿದರು.

ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ’ರವರು ವಾರಿಯರ್ಸ್ ಗಳ ಸುರಕ್ಷತೆಗಾಗಿ
ಮಾಸ್ಕ್ ಹಾಗೂ ಸ್ಯಾನಿಟೈಜರಗಳನ್ನು ವಿತರಿಸಿ,ಕೊರೋನಾ ಮುಂಜಾಗ್ರತಾ ಕ್ರಮದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಈ ಕೊರೋನಾ ಹೆಮ್ಮಾರಿ ಹರಡದಂತೆ ತಡೆಯುವಲ್ಲಿ ವಾರಿಯರ್ಸ್ ಗಳ ಕಾರ್ಯ ಅಮೋಘ. ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಜೀವ ಉಳಿಸುವ ಕೆಲಸ ಮಾಡುತ್ತಿರುವದು ಹೆಮ್ಮೆಪಡುವ ಸಂಗತಿ. ನೀವು ಕರ್ತವ್ಯದ ಜೋತೆಗೆ ನಿಮ್ಮ ಸುರಕ್ಷತೆ ಕಡೆಗೆ ಗಮನ ಹರಿಸಿ, ಮಾಸ್ಕ್ ಹಾಗೂ ಆಗಾಗ ಸ್ಯಾನೀಟೈಜರ್ ಬಳಕೆ ಮಾಡುವ ಮೂಲಕ ಸುರಕ್ಷರಾಗಿ ಕೇಲಸ ನಿರ್ವಹಿಸಲು ಸಲಹೆ-ಸೂಚನೆ ನೀಡಿದರು.

ಇವರಿಗೆ ನಮ್ಮೇಲ್ಲರ ಸಹಕಾರ ಅತಿ ಅಗತ್ಯ. ನಾವು ಮನೆಗಳಿಂದ ಹೊರಬರದೆ ಮನೆಗಳಲ್ಲೆ ಇದ್ದರೆ ಸಾಕು ವಾರಿಯರ್ಸ್ ಗಳ ಶ್ರಮಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಇದೇ ವೇಳೆಯಲ್ಲಿ ಅಧಿಕಾರಿಗಳೊಂದಿಗೆ ಶಾಸಕರು ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ಸಹ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಸ್ವಯಂಸೇವಕರು ಸೇರಿದಂತೆ ಮತ್ತಿತರು ಭಾಗವಹಿಸಿದರು.

ವರದಿ: ಅಮೋಘ ಎಮ್.ಬಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version