ದಿನದ ಸುದ್ದಿ
ಲಾಕ್ ಡೌನ್ ಎಫೆಕ್ಟ್ : ಮೆತ್ತಗಾಯ್ತು ಹತ್ತಿ ಬೆಳೆಗಾರರ ಬದುಕು ; ಸರ್ಕಾರ ನೆರವು ನೀಡಲು ರೈತರ ಆಗ್ರಹ
ಸುದ್ದಿದಿನ,ಯಾದಗಿರಿ : ಹತ್ತಿ ಖರೀದಿಯ ಜಿನ್ನಿಂಗ್ ಮಿಲ್ ಕಾರ್ಯ ಸ್ಥಗಿತ ಗೊಳಿಸಿದ ಕಾರಣ ಜಿಲ್ಲೆಯ ಹತ್ತಿ ಬೆಳೆಗಾರರಲ್ಲಿ ಆತಂಕ ಮೂಡಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಯಾದ್ಯಂತ 55897 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದಾರೆ ರೈತರು. ಆದರೆ 5ರಿಂದ 4ಸಾವಿರ ರೂಪಾಯಿಗಳಿಗೆ ಹತ್ತಿ ಬೆಲೆ ತಗ್ಗಿದೆ. ಕಾರಣ ಮಿಲ್ ಗಳಲ್ಲಿ ಮಾರಾಟವಾಗದೆ ದಾಸ್ತಾನು ಹಾಗೇ ಉಳಿದುಕೊಂಡಿವೆ.
ಈ ಹಿನ್ನೆಲೆ ರೈತನ ಮನೆ ಮತ್ತು ಮಿಲ್ ಗಳಲ್ಲಿ ಕೊಳೆಯುತ್ತಿದೆ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ. ಇವೆಲ್ಲದರ ಪರಿಣಾಮವಾಗಿ ಕೂಡಲೇ ಕೇಂದ್ರ, ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243