ದಿನದ ಸುದ್ದಿ
ನಮ್ಮ ನ್ಯಾಯಾಲಯಗಳು ಇತರೆ ಚಿಲ್ಲರೆ ಕೇಸುಗಳಲ್ಲಿ ಎಷ್ಟು ಜಬರ್ದಸ್ತ್ ಆಗಿರುತ್ತವೆ ನೋಡಿ..!
- ಪಂಜು ಗಂಗ್ಗೊಳ್ಳಿ, ವ್ಯಂಗ್ಯ ಚಿತ್ರಕಾರರು
ಮುಂಬೈಯ ಕುರ್ಲಾದ 19 ವರ್ಷ ಪ್ರಾಯದ ಆಲೀಂ ಪಟೇಲ್ ಮಾಹೀಂ ಎಂಬಲ್ಲಿ ಕಾರು ಸೀಟುಗಳನ್ನು ಹೊಲಿಯುವ ಕೆಲಸ ಮಾಡಿ ಅವನ ಕುಟುಂಬದ ಹೊಟ್ಟೆ ಪಾಡು ನಡೆಯುತ್ತಿತ್ತು. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ಬಸ್ಸು, ಲೋಕಲ್ ಟ್ರೈನ್ ಗಳು ಬಂದಾಗಿ ಲಕ್ಷಾಂತರ ಕೆಲಸಗಾರಂತೆ ಇವನೂ ಮನೆಯಲ್ಲೇ ಕುಳಿತುಕೊಳ್ಳಬೇಕಾಯಿತು.
ಜೂನ್ ನಲ್ಲಿ ಲಾಕ್ ಡೌನ್ ಸಡಿಲಗೊಂಡು ಅಗತ್ಯ ಸೇವೆಗಳನ್ನು ನಿರ್ವಹಿಸುವವರಿಗಾಗಿ ಲೋಕಲ್ ಟ್ರೈನ್ ಗಳನ್ನು ಶುರು ಮಾಡಿದಾಗ ಜೀವನ ನಿರ್ವಹಣೆಗೆ ಬೇರೆ ಮಾರ್ಗವಿಲ್ಲದ ಆಲೀಂ ಪಟೇಲ್ ಒಂದು ನಕಲಿ ಪಾಸನ್ನು ಮಾಡಿಕೊಂಡು ಲೋಕಲ್ ಟ್ರೈನಲ್ಲಿ ಮಾಹೀಂನ ತನ್ನ ಕೆಲಸಕ್ಕೆ ಹೋಗಿ ಬಂದು ಮಾಡಲು ಶುರು ಮಾಡಿದ.
ಆದರೆ, ಆಗಸ್ಟ್ 20 ರಂದು ಒಬ್ಬ ಟಿಸಿ ಇವನನ್ನು ಹಿಡಿದು ಚೀಟಿಂಗ್ ಕೇಸ್ ಹಾಕಿ ಮ್ಯಾಜಿಸ್ಟ್ರೇಟ್ ಕೋರ್ಟು ಇವನಿಗೆ ಜಾಮೀನು ನೀಡದೆ ಜೈಲು ಸೇರ ಬೇಕಾಯಿತು. ಆದಿತ್ಯ ಮೊಕಾಶಿ ಎಂಬ ಇವನ ಲಾಯರ್ ಸೆಸ್ಸನ್ ಕೋರ್ಟಲ್ಲಿ ಅಪೀಲ್ ಹಾಕಿ ಆಲೀಂ ಪಟೇಲ್ ಹೊಟ್ಟೆ ಪಾಡು ನಡೆಸಲು ಬೇರೇನೂ ದಾರಿಯಿಲ್ಲದೆ ಹೀಗೆ ಮಾಡಿದನೇ ವಿನಃ ಯಾರನ್ನೂ ವಂಚಿಸಲು ಅಲ್ಲ ಎಂದು ಕೇಳಿಕೊಂಡಾಗ ಕೋರ್ಟು 15000 ರುಪಾಯಿ ಬಾಂಡ್ ಮತ್ತು ವೈಯಕ್ತಿಕ ಶ್ಯೂರಿಟಿ ಪಡೆದು ಜಾಮೀನು ನೀಡಿತು, 40 ದಿನಗಳ ನಂತರ!
ಇದನ್ನೂ ಓದಿ
ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ https://suddidina.com/daily-news/coronavirus-and-hasana
ಸುದ್ದಿದಿನ.ಕಾಂ|ವಾಟ್ಸಾಪ್|9980346243