ದಿನದ ಸುದ್ದಿ
ದಾದಿಯರಿಗೊಂದು ಸಲಾಂ..!
- ಕೀರ್ತಿ ಪೂಜಾರಿ,ವಿಜಯಪುರ
ಇಡೀ ಜಗತ್ತು ಕೊರೋನಾ ಸೋಂಕಿಗೆ ತುತ್ತಾಗಿದೆ. ಈಗಾಗಲೇ ಹಲವಾರು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ ಎಷ್ಟೋ ಮಕ್ಕಳೂ (ಕಂದಮ್ಮಗಳು) ಕೂಡಾ ಬಲಿಯಾಗಿದ್ದಾರೆ ಹೀಗಿರುವಾಗ ಈಗ ದೇಶದ ರಕ್ಷಣೆಗಾಗಿ ಇರುವುದು ವೈದ್ಯಕೀಯ ಕ್ಷೇತ್ರ ಮಾತ್ರ. ಅದರಲ್ಲೂ ‘ನರ್ಸ್’ಗಳ ಕಾರ್ಯ ವೈಖರಿ ಮೆಚ್ಚುವಂತ್ತದ್ದಾಗಿದೆ. ಜನರಿಗೆ ಅವರು ಈ ಸೋಂಕಿನ ಬಗ್ಗೆ ತಿಳಿಹೇಳುತ್ತಿದ್ದಾರೆ.ಆದರೂ ಕೂಡಾ ಕೆಲವೋಂದಿಷ್ಟು ಜನರು ನರ್ಸ್‍ಗಳ ಮೇಲೇಯೇ ಹಲ್ಲೆ ಮಾಡಿದ್ದಾರೆ.
ಇದಾವುದನ್ನೂ ತಲೆಗೆ ಹಾಕಿಕೊಳ್ಳದೆ ಮುಂದಿನ ಕಾರ್ಯಗಳ ಬಗ್ಗೆ ಯೋಚಿಸುತ್ತಾ ಮುನ್ನಡೆಯುತ್ತಿದ್ದಾರೆ. ದೇಶಕ್ಕಾಗಿ ಬಾರ್ಡರ್ ನಲ್ಲಿದ್ದು ಹೊರಾಡುತ್ತಿರುವ ಸೈನಿಕರಹಾಗೆಯೇ, ಆಸ್ಪತ್ರೆಯಲ್ಲಿದ್ದು ಒಂದು ದಿನವೂ ಕೂಡಾ ಮನೆಯಲ್ಲಿರದೇ ಪ್ರತಿದಿನ ಜನರನ್ನು ಕಾಪಾಡುತ್ತಿದ್ದರೆ ಈ ನರ್ಸ್‍ಗಳು. ಅಂದರೇ, ಸೈನಿಕರು ದೆಶಕ್ಕೆ ಟೆರರಿಸ್ಟಗಳು ಬರದಂತೆ ಬಾರ್ಡರ್‍ನಲ್ಲಿ ಕಾಯುತ್ತಿದ್ದರೆ, ನರ್ಸ್‍ಗಳು ಮಾನವ ದೇಹಕ್ಕೆ ಕೊರೋನಾ ಸೊಂಕು ತಾಕದ ಹಾಗೆ ಕಾಳಜಿವಹಿಸುತಿದ್ದಾರೆ.
ಈ ಕೊರೋನಾ ಸೋಂಕಿನಿಂದ ಇಡೀ ಭಾರತ ದೇಶವು ಮಾರ್ಚ್ 14 ರಿಂದ ಇವತ್ತಿನವರೆಗೂ ಲಾಕ್‍ಡೌನ್ ಮಾಡಲಾಗಿದೆ. ಆದರೇ, ನರ್ಸ್‍ಗಳಿಗೆ ಯಾವುದೇ ಲಾಕ್‍ಡೌನ್ ಇಲ್ಲದಂತಾಗಿದೆ. ಅವರ ಕುಟುಂಬದವರೊಂದಿಗೂ ಕೂಡಾ ಕಲ ಕಳೆಯದಂತಾಗಿದೆ. ಇವರಿಗೆ ಯವುದೇ ಸರಿಯಾದ ಕಿಟ್‍ಗಳು ಸಹ ದೊರೆಯುತ್ತಿಲ್ಲ. ಅದರೂ ಕೂಡಾ ಹಿಂಜರಿಯದೇ ತಮ್ಮ ಕರ್ತವ್ಯನೇ ದೇವರೆಂದು ದೇಶಕ್ಕಾಗಿ ದುಡುಯುತ್ತಿರುವ ಈ ನರ್ಸ್‍ಗಳಿಗೆ ನನ್ನದೊಂದು ಸಲಾಂ.
ಸುದ್ದಿದಿನ.ಕಾಂ|ವಾಟ್ಸಾಪ್|9980346243