ದಿನದ ಸುದ್ದಿ

ಸಿಟಿಇಟಿ ಪರೀಕ್ಷೆಗೆ ತ್ರಿ-ಭಾಷಾ ಸೂತ್ರ ರದ್ದು; ಪ್ರಾದೇಶಿಕ ಭಾಷೆ ಆಯ್ಕೆಗೆ ಅವಕಾಶ ಕೊಟ್ಟ ಕೇಂದ್ರ

Published

on

ಸುದ್ದಿದಿನ ಡೆಸ್ಕ್ : ಕೇಂದ್ರ ಸರ್ಕಾರದ ಶಾಲೆಗಳ ಶಿಕ್ಷಕರ ನೇಮಕಕ್ಕೆ ನಡೆಸುತ್ತಿದ್ದ ಸಿಟಿಇಟಿ ಪರೀಕ್ಷೆಯ ತ್ರಿಭಾಷಾ ಸೂತ್ರ ರದ್ದುಗೊಳಿಸಿ, ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ.

ಕೇಂದ್ರ ಸರ್ಕಾರದ ನಡೆಸುತ್ತಿರುವ ಶಾಲೆಗಳಲ್ಲಿ 1ರಿಂದ 8ನೇ ತರಗತಿಯ ನೇಮಕಕ್ಕೆ ಪ್ರವೇಶ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯವಾಗಿದ್ದು, ಮೊದ ಮೊದಲು 20 ಭಾಷೆಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆ ನಡೆಸಿತ್ತು. ನಂತರ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ, ತೆಲುಗು, ಗುಜರಾತ್ ಮತ್ತು ಬೆಂಗಾಳಿ ಸೇರಿದಂತೆ 17 ಭಾಷೆಗಳನ್ನು ಹೊರತುಪಡಿಸಿ ಕೇವಲ ಮೂರೇ ಭಾಷೆಯಲ್ಲಿ ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಭ್ಯರ್ಥಿಗಳಿಗೆ ಪ್ರಾದೇಶಿಕ ಭಾಷೆ ಆಯ್ಕೆಗೆ ಅವಕಾಶ ಕಲ್ಪಿಸಿತು.

ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸಿಟಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

2018ರ ಸೆಪ್ಟೆಂಬರ್ 16ರಂದು ಸಿಟಿಇಟಿ ನಡೆಯುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version