ರಾಜಕೀಯ

ಹಾಲು ಕುಡಿದ ಮಕ್ಳೇ ಬದುಕಲ್ಲ, ವಿಷ ಕುಡಿದ ಮಕ್ಳು ಬದುಕ್ತವಾ..? : ಡಿ.ಕೆ.ಶಿವಕುಮಾರ್ ಕಿಡಿ

Published

on

ಸುದ್ದಿದಿನ, ರಾಮನಗರ : ಹಾಲು‌ ಕುಡಿದ ಮಕ್ಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಳು ಬದುಕ್ತವಾ? ಯಡಿಯೂರಪ್ಪ ಆಪರೇಶನ್ ಕಮಲ, ಸಾಲಾ ಮನ್ನಾ ಅಂತ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಚಿವ ಡಿ.ಕೆ‌.ಶಿವಕುಮಾರ್ ವ್ಯಂಗ್ಯವಾಡಿದರು.

ರಾಮನಗರದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ರೈತರ ಸಾಲ ಮನ್ನಾ ವಿಚಾರದಲ್ಲಿ ಮೊಸಳೆ ಕಣ್ಣೀರು ಹಾಕ್ತಾರೆ. ಸಮ್ಮಿಶ್ರ ಸರ್ಕಾರ ಬಂದಾಗಿಂದ ಅವರು ಆಪರೇಶನ್ ಕಮಲ ನಡೆಸುತ್ತಲೇ ಇದ್ದಾರೆ‌ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ‌ನಡೆಸಿದರು.

ಯಡಿಯೂರಪ್ಪ ಅವರ ಜೊತೆಗೆ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೀಶ್ವರ್ ಅವರು ಆಪರೇಶನ್ ಕಮಲದಲ್ಲಿ ತೊಡಗಿದ್ದಾರೆ. ನಮಗೂ ಕೂಡ ಹಲವು‌ ವಿದ್ಯೆಗಳು ಗೊತ್ತು ನಾವು ಅವರ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಕಿಡಿಕಾರಿದರು.

Trending

Exit mobile version