ರಾಜಕೀಯ
ಲೋಕಾಸಭೆ ಚುನಾವಣೆ : ಟಿಕೆಟ್ ಗಾಗಿ ಗದ್ದಲ ಮಾಡ್ಕೊಬೇಡಿ : ಡಿಕೆಶಿ ಸೂಚನೆ
ಸುದ್ದಿದಿನ, ಬಳ್ಳಾರಿ : ನಗರದ ಕಾಂಗ್ರೆಸ್ ಪ್ರತಿನಿಧಿ್ಳಗಳ ಸಭೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಬಂದ ಶಾಸಕ ನಾಗೇಂದ್ರ ಅವರಿಗೆ ಲೋಕಸಭಾ ಟಿಕೆಟ್ ನೀಡಬೇಕೆಂದು ಒತ್ತಾಯ ಪಕ್ಷ ತೀರ್ಮಾನ ಮಾಡಿದ ಅಭ್ಯರ್ಥಿಯ ಪರ ಕೆಲಸ ಮಾಡಿ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಡಿಕೆಶಿ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ಲೋಕಸಭಾ ಅಭ್ಯರ್ಥಿಯಾಗಿದ್ದ ಎನ್ ವೈ ಹನುಮಂತಪ್ಪ , ವಯಸ್ಸಾಗಿದೆ ಅನ್ನೋ ಕಾರಣಕ್ಕೆ ಹನುಮಂತಪ್ಪ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಹಾಗಾಗೀ ನಾಗೇಂದ್ರನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.ಒಂದು ವೇಳೆ ನಾಗೇಂದ್ರನಿಗೆ ಟಿಕೆಟ್ ನೀಡದೇ ಇದ್ರೆ ನಾಗೇಂದ್ರ ಸೋದರ ಸಂಬಂಧಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಆದ್ರೆ ಬಳ್ಳಾರಿಯ ಕೆಲ ಕಾಂಗ್ರೆಸ್ ಮುಖಂಡರು ರಾಮಪ್ರಸಾದ್ ಟಿಕೆಟ್ ನೀಡುವಂತೆ ಒತ್ತಾಯ ಮಾಡ್ತಾ ಇದ್ದಾರೆ. ರಾಮ್ ಪ್ರಸಾದ್ ಮೂಲ ಕಾಂಗ್ರೆಸ್ಸಿನಾಗಿದ್ದು ,ಸುಮಾರು ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಾ ಇದ್ದಾರೆ. ಹಾಗಾಗೀ ರಾಮ್ ಪ್ರಸಾದ್ ಟಿಕೆಟ್ ನೀಡಬೇಕೆಂದು ಒತ್ತಾಯ. ಯಾರೋ ಗೆಲ್ಲುವ ಅಭ್ಯರ್ಥಿ ಇದ್ದಾರೋ ಅವರಿಗೆ ಟಿಕೆಟ್ ಕೊಡೋದು ಒಳ್ಳೆಯದು. ನಾವು ಸರ್ವೇ ನಡೆಸ್ತಾ ಇದ್ದೇವೆ. ಯಾರ ಕಡೆ ಜನರ ಒಲವು ಜಾಸ್ತಿ ಇದೆ ಅವರಿಗೆ ಟಿಕೆಟ್ ಕೊಡ್ತೇವೆ ಯಾರೂ ಟಿಕೆಟ್ ಗಾಗಿ ಗದ್ದಲ ಮಾಡ್ಕೊಬೇಡಿ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401