/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ನಾಲ್ಕು ದಿನಗಳಲ್ಲಿ 2ನೇ ಸಲ ‘ಐಪಿಎಸ್ ಅಧಿಕಾರಿ ರೂಪಾ’ರಿಂದ ವಂಚನೆ ದೂರು ಸಲ್ಲಿಕೆ..!

Published

on

ಸುದ್ದಿದಿನ, ಬೆಂಗಳೂರು : ‘ಡಿ_ರೂಪಾ_ಐಪಿಎಸ್‌’ ಹೆಸರಿನಲ್ಲಿ ‘ಇನ್‌ಸ್ಟಾಗ್ರಾಂ’ನಲ್ಲಿ ನಕಲಿ ಖಾತೆ ತೆರೆದಿದ್ದ ಅಪರಿಚಿತರು, ‘‌ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ’ ಎಂಬ ಪೋಸ್ಟ್ ಹಾಕಿದ್ದರು. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ‘ನಾನು ಯಾವುದೇ ಇನ್‌ಸ್ಟಾಗ್ರಾಂ ಖಾತೆ ಹೊಂದಿಲ್ಲ. ಯಾರೂ ಹಣ ಹಾಕಬೇಡಿ’ ಎಂದು ಟ್ವೀಟ್ ಮೂಲಕ ರೂಪಾ ಸ್ಪಷ್ಟಪಡಿಸಿದ್ದರು.ಈ ಸಂಬಂಧ 2018ರ ಡಿ.30ರಂದು ಸೈಬರ್ ಕ್ರೈಂ ಠಾಣೆಗೂ ದೂರು ನೀಡಿದ್ದರು ರೂಪಾ.

ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಹೆಸರಿನಲ್ಲಿ ವಂಚನೆ ಮಾಡಿದ್ದು, ಮಹಿಳೆಯೊಬ್ಬರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಲಖನೌ ಪೊಲೀಸರಿಗೆ ಕರೆಮಾಡಿನಾನು ಗೃಹರಕ್ಷಕದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಖನೌಗೆ ಬರುತ್ತಿದ್ದೇನೆ.ಡಿ.29ರಿಂದ ಜ.3ರವರೆಗೆ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದ‌ರು ಆ ಮಹಿಳೆ.

ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಬುಕ್ ಮಾಡಿದ್ದರು. ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಕೃತ್ಯ ಬಯಲಾಗಿದೆ. ನಾನು ರೂಂ ಬುಕ್ ಮಾಡುವಂತೆ ಯಾರಿಗೂ ಕರೆ ಮಾಡಿಲ್ಲವಲ್ಲ ಎಂದಿದ್ದ ರೂಪಾ. ಯಾರೋ ನಿಮ್ಮ ಹೆಸರು ಹೇಳಿಕೊಂಡು 9449990544 ಸಂಖ್ಯೆಯಿಂದ ಕರೆ ಮಾಡಿದ್ದರು ಎಂದಿದ್ದರು ತ್ರಿಪಾಠಿ. ಬಳಿಕ ಆ ಸಂಖ್ಯೆಗೆ ಕರೆ ಮಾಡಿದ್ದ ಅಧಿಕಾರಿ ರೂಪಾ ಅವರು ಆ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಬನಶಂಕರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ ರೂಪಾ.

ಮೊಬೈಲ್ ಸಂಖ್ಯೆಯ ಮೂಲ ಪತ್ತೆ ಹಚ್ಚಿರುವ ಪೊಲೀಸರು ಮಂಗಳೂರಿನ ಬಲ್ಮಠದಲ್ಲಿರುವ ಚಿರಾಗ್’ ಅಪಾರ್ಟ್‌ಮೆಂಟ್ ನಿವಾಸಿ ಮಹಿಳೆಯ ನಂಬರ್ ಅದಾಗಿತ್ತು, ಆದರೆ‌ ತಿಂಗಳ ಹಿಂದೆಯೇ ನನ್ನ ಮೊಬೈಲ್ ಕಳೆದುಹೋಗಿತ್ತು‌ ಎಂದಿರೋ ಮಹಿಳೆ, ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೊಟ್ಟಿದಾಗಿ ಹೇಳಿದ್ದಾರೆ.

ಎಫ್‌ಐಆರ್ ಹಾಗೂ ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್‌ಎನ್‌ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಖರೀದಿಸಿದ್ದೇನೆ’ ಎಂದು ಹೇಳಿಕೆ ಕೊಟ್ಟಿದ್ದಾರೆ ಮಹಿಳೆ. ಆದರೆ, ಕರೆ ಹೋದ ದಿನ ಆ ಮೊಬೈಲ್ ಸಂಖ್ಯೆಯನ್ನು ಅದೇ ಮಹಿಳೆ ಬಳಸುತ್ತಿದ್ದರೋ? ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version