ದಿನದ ಸುದ್ದಿ

ಕೋಟೆ ನಾಡಿನ ದಲಿತ ನಾಯಕ ಎಂ.ಜಯಣ್ಣ ನಿಧನ : ಮುರುಘಾ ಶರಣರಿಂದ ಸಂತಾಪ ಸೂಚನೆ

Published

on

ಸುದ್ದಿದಿನ, ಚಿತ್ರದುರ್ಗ:ನಿರಂತರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾಗಿದ್ದ ಎಂ ಜಯಣ್ಣ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಮುರುಘಾ ಶರಣ ಸಂತಾಪ

ಜಯಣ್ಣ ಅವರ ಸಾವು ನಾಡಿಗೆ ತುಂಬಲಾರದ ನಷ್ಟ ಹಾಗೂ ಆಘಾತವನ್ನುಂಟು ಮಾಡಿದೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದ ಶ್ರೀಯುತರು ನೀರಾವರಿ,ರೈಲ್ವೆ, ಅಪ್ಪರ್ ಭದ್ರಾ ಮೊದಲಾದ ಮೆಗಾ ಪ್ರಾಜೆಕ್ಟ್ ಗಳ ಹಿಂದೆ ಇದ್ದ ಅವರ ಹೋರಾಟವನ್ನು ಸ್ಮರಿಸಲೇಬೇಕು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದೆವು.

ದಾವಣಗೆರೆ ಶಿವಯೋಗಾಶ್ರಮದ ವಿರಕ್ತಮಠದಿಂದ ಶೂನ್ಯಪೀಠ ಅಲ್ಲಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು . ಹೋರಾಟಗಾರರಾದ ಶ್ರೀಯುತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಡಾ .ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ಸೂಚಿಸಿದ್ದಾರೆ .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version