ದಿನದ ಸುದ್ದಿ
’42 ಪಿಡಿಓ’ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ‘ದಲಿತ ಸೇನೆ’ಯಿಂದ ಪ್ರತಿಭಟನೆ
ಸುದ್ದಿದಿನ,ಸುರಪುರ : ತಾಲ್ಲೂಕಿನ ನಲವತ್ತೆರಡು (42) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಪೂರ್ಣವಾಗಿ ಅವ್ಯವಹಾರ ನಡೆಸಿದ್ದು, ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಗೂ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಬೇಕೆಂದು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ರಣಿಯನ್ನು ಮಂಗಳವಾರ ದಲಿತ ಸೇನೆ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಸಮಿತಿ ವತಿಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಆದ ಮಲ್ಲಿಕಾರ್ಜುನ್ ಹನಸೂಗುರು ಹಾಗೂ ದಲಿತ ಸೇನೆ ಜಿಲ್ಲಾಧ್ಯಕ್ಷ ರಾದ ಅಶೋಕ ಹೊಸಮನಿ ಹಾಗು ಜಿಲ್ಲಾ ಪ್ರದಾನ ಕಾರ್ಯದರ್ಶಿ ಬೀಮರಾಯ ಕಡಿಮನಿ, ಜಿಲ್ಲಾ ಉಪಾಧ್ಯಕ್ಷ ರಘುನಾಥ್ ಜಿಲ್ಲಾ ಖಜಾಂಚಿ ಶರಣಪ್ಪ ಚತುರ್ವೇದಿ ಸುರಪುರ ತಾಲ್ಲೂಕ ಅಧ್ಯಕ್ಷರಾದ ನಿಂಗಣ್ಣ ಎಂ ಗೊನಾಲ ಹುಣಸಗಿ, ತಾಲ್ಲೂಕು ಅಧ್ಯಕ್ಷರಾದ ಭೀಮಣ್ಣ ಬಲಿಿಶಟಿಹಾಳ ಹಾಗೂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಾದ ಶಿವು ಆಂದೋಲಾ ಹಾಗೂ ಸೇನೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401