ದಿನದ ಸುದ್ದಿ

ಗ್ರಾಮಪಂಚಾಯ್ತಿ ಅಧ್ಯಕ್ಷೆ ದಲಿತ ಮಹಿಳೆಯನ್ನು ನೆಲದ ಮೇಲೆ ಕೂರಿಸಿ ಸಭೆ ; ಈ ಅಮಾನವೀಯ ಘಟನೆ ವಿರುದ್ಧ ಜನರ ಭಾರೀ ಆಕ್ರೋಶ

Published

on

ಸುದ್ದಿದಿನ,ಚೆನ್ನೈ: ಚೆನ್ನೈನ ಕಡಲೂರು ಜಿಲ್ಲೆಯ ತೆರ್ಕುಟ್ಟಿಟ್ಟೈನ ಗ್ರಾಮ ಪಂಚಾಯಿತಿಯ ದಲಿತ ಮಹಿಳೆಯನ್ನು ನೆಲೆದ ಮೇಲೆ ಕೂರಿಸಿ ಜುಲೈ ತಿಂಗಳಲ್ಲಿ ಸಭೆ ನಡೆಸಿರುವ ಅಮಾನವೀಯ ಘಟನೆಯೊಂದು ನಡೆದಿದೆ.

ತೆರ್ಕುಟ್ಟಿಟ್ಟೈ ಗ್ರಾಮದ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾದ ಎಸ್ ರಾಜೇಶ್ವರಿಯವರನ್ನು ಮೇಲ್ಜಾತಿಯ ಉಪಾಧ್ಯಕ್ಷ ಮೋಹನ್ ರಾಜನ್ ಸಭೆಯಲ್ಲಿ ಕೆಳಗೆ ಕೂರಿಸಿ ಅಮಾನವೀಯತೆ ಮೆರೆದಿದ್ದಾನೆ. ಈಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕೃತ್ಯದ ವಿರುದ್ಧ ರಾಜೇಶ್ವರಿಯವರು ಕಡಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2020 ರ ಜುಲೈನಲ್ಲಿ ನಡೆದ ಸಭೆಯಲ್ಲಿ ರಾಜೇಶ್ವರಿಯವರನ್ನು ದಲಿತೆ ಎಂಬ ಕಾರಣಕ್ಕೆ ನೆಲದ ಮೇಲೆ ಕೂರಿಸಿದ್ದು, ಇನ್ನುಳಿದ ಪಂಚಾಯತ್ ನ ಎಲ್ಲಾ ಸದಸ್ಯರುಗಳು ಕುರ್ಚಿ ಮೇಲೆ ಕೂತು ಸಭೆನಡೆಸಿದ್ದಾರೆ.

ಈ ಘಟನೆಗೆ ಕಾರಣರಾದ ಪಂಚಾಯತಿಯ ಉಪಾಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಕಡಲೂರು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಉಪಾಧ್ಯಕ್ಷರಾದ ಮೋಹನ್ ರಾಜನ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿ, ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅಮಾನತುಗೊಳಿಸಿ ತನಿಖೆಗೆ ಆದೇಶವನ್ನು ನೀಡಿದ್ದಾರೆ.

ತೆರ್ಕುಟ್ಟಿಟ್ಟೈ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ಆರು ವಾರ್ಡಿನ ಸದಸ್ಯರು ಇದ್ದಾರೆ. ಅವರಲ್ಲಿ ನಾಲ್ವರು ಹಿಂದೂ ಜಾತಿಗೆ ಸೇರಿದ್ದವರಾಗಿದ್ದಾರೆ ಮತ್ತು ಇಬ್ಬರು ಹಿಂದೂಳಿದ ಆದಿ-ದ್ರಾವಿಡ ಸಮುದಾಯಕ್ಕೆ ಸೇರಿದ್ದಾರೆ. ರಾಜೇಶ್ವರಿ ಅವರ ಪ್ರಕಾರ, ಇನ್ನೊಬ್ಬ ದಲಿತ ವಾರ್ಡಿನ ಸದಸ್ಯೆ ಸುಗಂತಿ ಅವರನ್ನು ಕೂಡ ಸಭೆಗಳಲ್ಲಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version