ದಿನದ ಸುದ್ದಿ
ಜೇವರ್ಗಿ | ದಲಿತರ ಮದುವೆ ಮೆರವಣಿಗೆಯಲ್ಲಿ ಸವರ್ಣೀಯರ ಕಲ್ಲು ತೂರಾಟ : ದಲಿತ ಸೇನೆ ಖಂಡನೆ
ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಳ್ಳಿ ನಾಗರಾಳ್ ಗ್ರಾಮದ ದಲಿತ ಯುವಕ ಮಲ್ಲು ಬಡಿಗೇರ್ ರವರ ಮದುವೆ ಮೆರವಣಿಗೆ ತಮ್ಮ ಏರಿಯಾ ದಲ್ಲಿ ಏಕೆ? ಎಂದು ಊರೊಳಗಿನ ಸವರ್ಣೀಯರು ಹಾಗೂ ಒಬಿಸಿ ಎಂದು ಕರೆಸಿ ಕೊಳ್ಳುವ ಎಲ್ಲರೂ, ದಲಿತರು ನಮ್ಮೇರಿಯಾದಲ್ಲಿ ಬರಲೇಬಾರದು ಎಂದು ಒಂದಾಗಿ ಮಧು ಮಕ್ಕಳ ಮೆರವಣಿಗೆಯಲ್ಲಿ ಸಂತೋಷದಿಂದ ಬರುತಿದ್ದ ಮಕ್ಕಳು, ಮಹಿಳೆಯರು, ಹಿರಿಯರು, ತಾಯಿಂದಿರಮೆಲೆ ಧಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
ದಲಿತರು ಏನು ಮಾಡಿದ್ದರು ಮನುವಾದಿಗಳೇ ? ಯಾವ ಕಾರಣಕ್ಕಾಗಿ ಈತರಹದ ಹಲ್ಲೆ???
ಊರೊಳಗಿಂದ ತಮ್ಮ ಮನೆಗಳಿಗೆ ಹೋಗುವುದಕ್ಕೂ ನಿರ್ಬಂಧವೇ? ಇಷ್ಟೊಂದು ಭಯಾನಕವಾಗಿ ಕಲ್ಲು, ಬಡಿಗೆ, ತಲವಾರು, ರಾಡು ಗಳಿಂದ ಮಾರಣಾಂತಿಕವಾಗಿ ಅಟ್ಟಾಡಿಸಿ ಹೊಡೆಯುತ್ತೀರಿ ಅಂದರೆ ! ನಿಮಲ್ಲಿ ಮನುಷ್ಯತ್ವವೇ ಇಲ್ಲವೇ?
ಕತ್ತಲೆಯಲ್ಲಿ ಕಲ್ಲು ತೂರಾಡಿ, ದಲಿತರ ಓಣಿ ಹೊಕ್ಕು, ಮನೆಯಲ್ಲಿದ್ದ ಅಮಾಯಕ ಹೆಣ್ಣು ಮಕ್ಕಳು, ಮಕ್ಕಳು, ವಯಸ್ಕರು ಅನ್ನದೆ ಹೊಡೆದು ಕೈ ಕಾಲು ಮುರಿದು ಕೇ ಕೇ ಹಾಕಿ ನಕ್ಕಿದ್ದೀರಲ್ಲ ,ನಿಮ್ಮನೆಯಲ್ಲಿ ಅವ್ವ, ಅಪ್ಪ,ಚಿಕ್ಕ ಚಿಕ್ಕ ತಮ್ಮ ತಂಗಿಯರು,ಮಕ್ಕಳು ಇಲ್ಲವೇ?
ಆಳುವ ಸರಕಾರ ಜೀವಂತ ಏನಾದ್ರೂ ಇದ್ರೆ, ತಕ್ಷಣ ಕ್ರಮಕ್ಕೆ ಮುಂದಾಗಿ ಫೋನ್ ಕಾಲ್ recieve ಮಾಡದೆ ಸುಮಾರು ಎರಡು ಗಂಟೆಗಳ ಕಾಲ ಉದ್ದೇಶ ಪೂರ್ವಕವಾಗಿ ತಡ ಮಾಡಿದ ಮತ್ತು ಎಸ್ ಪಿ ಗುಲ್ಬರ್ಗಾ ರವರು ಹೇಳುವವರೆಗೂ ಕಾಲಹರಣ ಮಾಡಿ ಕರ್ತ್ಯವ್ಯ ಲೋಪ ಮಾಡಿದ ಕೇವಲ 10 km ದೂರದಲ್ಲಿರುವ ಪಿಎಸ್ಐ ವಿರುದ್ಧ ಕ್ರಮ ಜರುಗಿಸಿ.
ಅನ್ಯಾಯಕ್ಕೊಳಗಾದ ಎಲ್ಲರು ದಲಿತ ಸೇನೆ ಯ ಹೋರಾಟದಲ್ಲಿ ಪಾಲ್ಗೊಳ್ಳಲಿ. ಇವತ್ತು ನಾವು ರಾಜ್ಯದ ಗೃಹಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ, ಸಮಾಜಕಲ್ಯಾಣ ಮಂತ್ರಿಗಳಿಗೂ, ಉಪ ಮುಖ್ಯ ಮಂತ್ರಿಗಳಿಗೂ ಹಾಗು ಡಿಜಿಪಿ ರವರಿಗೂ ಮನವಿ ಸಲ್ಲಿಸಲಿದ್ದೇವೆ.
ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಎಲ್ಲರಿಗೂ ಮೇಲ್ವರ್ಗದ ಸಮಾಜಘಾತುಕರ ವಿರುದ್ಧದ ಹೋರಾಟದಲ್ಲಿ ದಲಿತ ಸೇನೆ ಯೊಂದಿಗೆ ಕೈ ಜೋಡಿಸಲು ಮನವಿ ಕೂಡ ಮಾಡಲಾಗುತ್ತದೆ.
ಮತ್ತು ಇದೆ ವಿಷಯದ ಕುರಿತು ರಾಜ್ಯದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲು ಸೂಚಿಸಲಾಗುತ್ತಿದೆ ಎಂದು ದಲಿತ ಸೇನೆ ರಾಜ್ಯಧ್ಯಕ್ಷರಾದ ಹನುಮಂತ ಜಿ ಯಳಸಂಗಿ ಸುಚಿಸಿದರು ಈ ಸಂದರ್ಭದಲ್ಲಿ ದಲಿತ ಸೇನೆ ಶಹಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಆಂದೋಲಾ ದಲಿತ ಸೇನೆ ಪದಾಧಿಕಾರಿಗಳು ಭಾಗವಹಿಸಿದ್ದರು.
–ದಲಿತ ಸೇನೆ ಕಳುಹಿಸಿದ ಯಥಾವತ್ ವರದಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243