ದಿನದ ಸುದ್ದಿ
ಸಿಜಿ ಆಸ್ಪತ್ರೆಯ ಹೆರಿಗೆ ವಿಭಾಗ ಮತ್ತು ಓಪಿಡಿ ಬೇರೆಡೆಗೆ ಶಿಫ್ಟ್
ಸುದ್ದಿದಿನ, ದಾವಣಗೆರೆ : ಸಿಜಿ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಕೊರೊನಾ ಪಾಸಿಟಿವ್ ಮತ್ತು ಐಸೊಲೇಷನ್ ಪ್ರಕರಣಗಳನ್ನು ಮಾತ್ರ ಚಿಕಿತ್ಸೆ ನೀಡಲಾಗುವುದು. ಸಿಜಿ ಆಸ್ಪತ್ರೆ ಆವರಣದಲ್ಲಿರುವ ಓಬಿಜಿ ಹೆರಿಗೆ ವಿಭಾಗವನ್ನು ಹಳೇ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹಾಗೂ ಓಪಿಡಿಯನ್ನು ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243