ದಿನದ ಸುದ್ದಿ

ದಾವಣಗೆರೆ ಜಿಲ್ಲೆಯ ಜನರೇ ಗಮನಿಸಿ : ವಿದ್ಯುತ್ ಬಿಲ್‍ಗಳ ಸ್ಪಷ್ಟೀಕರಣಕ್ಕೆ ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ ನಿಯಂತ್ರಣ ಹಿನ್ನೆಲೆ ಏಪ್ರಿಲ್ 2020 ರ ತಿಂಗಳಿನಲ್ಲಿ ಗ್ರಾಹಕರಿಗೆ ಮೀಟರ್‍ನಲ್ಲಿರುವ ವಾಸ್ತವಿಕ ರೀಡಿಂಗ್‍ನ ಪ್ರಕಾರ ಬಿಲ್ ನೀಡಿರುವುದಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿ ಆಧಾರದ ಮೇಲೆ ವಿದ್ಯುತ್ ಬಿಲ್ ಜನಿತಗೊಳಿಸಲಾಗಿರುತ್ತದೆ.

ಮೇ-2020 ರ ಮಾಹೆಯಲ್ಲಿ ಸೀಲ್‍ಡೌನ್ ಏರಿಯಾಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ ಬಳಸಿದ ಯುನಿಟ್‍ನ ಆಧಾರದಲ್ಲಿ ವಿದ್ಯುತ್ ಬಿಲ್ ವಿತರಣೆ ಮಾಡಲಾಗುತ್ತಿರುತ್ತದೆ. ಮೇ 2020 ರಲ್ಲಿ ವಿತರಿಸಲಾದ ವಿದ್ಯುತ್ ಬಿಲ್ಲುಗಳ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ಈ ಕೆಳಗಿನ ಬೆಸ್ಕಾಂನ ಉಪವಿಭಾಗ ಕಚೇರಿಗಳ ದೂರವಾಣಿ ಸಂಖ್ಯೆಗಳಿಗೆ ವಾಟ್ಸಾಪ್, ಎಸ್‍ಎಂಎಸ್ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಬಹುದು.

  • ದಾವಣಗೆರೆ ನ.ಉ.ವಿಭಾಗ 1 ಮೊ.ಸಂ : 9448279028, 9449844729.
  • ದಾವಣಗೆರೆ ನ.ಉ.ವಿಭಾಗ 2 ಮೊ.ಸಂ : 9448279029, 9449844731.
  • ದಾವಣಗೆರೆ ಗ್ರಾ.ಉ.ವಿಭಾಗ ಮೊ ಸಂ.ಗಳು
  • ಆನಗೋಡು :9448279030, 9449843556.
  • ಜಗಳೂರು :9448094833, 9449844744.
  • ಚನ್ನಗಿರಿ ‌ :9448279031, 9449844743.
  • ಸಂತೆಬೆನ್ನೂರು :9448279032, 9449844738.
  • ಹರಿಹರ :9448279033, 9449844740
  • ಹೊನ್ನಾಳಿ: 9448279034, 9449843562
  • ನ್ಯಾಮತಿ: 9448279035, 9449843563
  • ಹರಪನಹಳ್ಳಿ : 8277893935, 8095837100
  • ತೆಲಗಿ :9448279036, 9448913161. 8277893181, 9972078156

ಮೇಲಿನ ನಂಬರ್ ಗಳಿಗೆ ಸಂಪರ್ಕಿಸಬಹುದೆಂದು ಚಿತ್ರದುರ್ಗ ಬೆವಿಕಂನ ಮುಖ್ಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version