ದಿನದ ಸುದ್ದಿ

ದಾವಣಗೆರೆ | ಗಾಜಿನ ಮನೆ ಪ್ರೇಕ್ಷಣೀಯ ಸ್ಥಳವಾಗಿಸಲು ಒತ್ತು: ಸಚಿವ ಡಾ.ನಾರಾಯಣ ಗೌಡ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲೆಯಲ್ಲಿರುವ ಗಾಜಿನ ಮನೆ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿದ್ದು, ಪೂನಾ-ಬೆಂಗಳೂರು ರಸ್ತೆಗೆ ಹತ್ತಿರವಿರುವುದರಿಂದ ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲೆಯ ಮುಖ್ಯ ದ್ವಾರದ ಬಳಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಫಲಕಗಳನ್ನು ಹಾಕಬೇಕು. ಈ ಬಗ್ಗೆ ಪ್ರವಾಸೋದ್ಯಮ ಹಾಗೂ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ತೋಟಗಾರಿಕೆ ಸಚಿವರಾದ ಡಾ. ನಾರಾಯಣ ಗೌಡ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಾಭದ್ರ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ವತೆ ವಹಿಸಿ ಮಾತನಾಡಿದ ಅವರು, ರೈತರು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಹೂವು ಮಾರಾಟ ಮಾಡಲು ಮಳಿಗೆಗಳನ್ನು ನಿರ್ಮಿಸಿ ರೈತ ಸಂತೆಗಳನ್ನು ಮಾಡಬೇಕೆಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version