ದಿನದ ಸುದ್ದಿ
ದಾವಣಗೆರೆ ಸ್ಮಾರ್ಟ್ ಸಿಟಿ ‘ಸುತ್ತಮುತ್ತ’..!
ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರ ಸ್ಮಾರ್ಟ್ ಸಿಟಿಯಾಗಿ ಹೊಸ ರೂಪ ತಾಳಲಿದೆ. ಇದರ ಹಿಂದೆ ಹಲವು ಎಂಜಿನಿಯರ್ ಗಳ ಶ್ರಮ ಅಪಾರವಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯನ್ನು ಎಂಜಿನಿಯರ್ ಗಳು ಸಾಕಾರಗೊಳಿಸುತ್ತಿದ್ದಾರೆ. ಒಟ್ಟು 98 ನಗರಗಳು ‘ಸ್ಮಾರ್ಟ್ ಸಿಟಿ’ಗಳಾಗಲಿವೆ. ಈ ನಗರಗಳ ಪಟ್ಟಿಯಲ್ಲಿ ದಾವಣಗೆರೆ ನಗರವೂ ಒಂದಾಗಿದ್ದು, ಹಲವು ನಗರಗಳಿಗೆ ಇದು ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ದೇಶದ ವಿವಿಧ ರಾಜ್ಯಗಳ 24 ರಾಜಧಾನಿಯ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಹಂತ, ಹಂತವಾಗಿ ಕೆಲಸ ನಡೆಯುತ್ತಿದೆ. ಸ್ಮಾರ್ಟ್ ಸಿಟಿಗಳೆಂದರೆ, ಶುದ್ಧ ನೀರು, ಸ್ವಚ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಆದ್ಯತೆ ನೀಡಬೇಕಾಗಿದ್ದು, ಎಂಜಿನಿಯರ್ ಗಳ ನೇತೃತ್ವದ ತಂಡ ಅಂತಹ ಕೆಲಸಗಳನ್ನು ಮಾಡಲು ಮುಂದಾಗಿದೆ.
ನಗರಗಳು ಎದುರಿಸುತ್ತಿರುವ ಆಡಳಿತದ ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕೆಲಸಗಳನ್ನು ಎಂಜಿನಿಯರ್ ಮಾಡುತ್ತಿದ್ದಾರೆ. ಒಟ್ಟಾರೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಸ್ಮಾರ್ಟ್‌ಸಿಟಿಗಳ ಮೂಲ ಕಾರ್ಯತಂತ್ರವಾಗಿದ್ದು, ನಗರ ಕೆಲವೇ ದಿನಗಳಲ್ಲಿ ಸ್ಮಾರ್ಟ್ ಆಗಲಿದೆ.
100 ಸ್ಮಾರ್ಟ್ ಸಿಟಿ
ಕೇಂದ್ರ ಸರಕಾರ ಈಗಾಗಲೇ 100 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ರೂ.48,000 ಕೋಟಿ ವಿನಿಯೋಗಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಯೋಜನೆ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಖಾಸಗಿ ಸಹಭಾಗಿತ್ವದ ಬಗ್ಗೆಯೂ ಕೇಂದ್ರ ಸರ್ಕಾರ ಒಲವು ಪ್ರಕಟಿಸಿದ್ದು, ಹಾಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಹೊಣೆಗಾರಿಕೆಯೂ ರಾಜ್ಯ ಸರ್ಕಾರಗಳ ಮೇಲಿದೆ. ಈ ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳಲು ನಗರಗಳ ಜನರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ.
ಸ್ಮಾರ್ಟ್ ಸಿಟಿ : ಇಂಜಿನಿಯರ್ ಗಳು
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಏಳು ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ನಾಲ್ಕು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲ ಹಂತದಲ್ಲೇ ಆಯ್ಕೆ
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೊದಲ ಹಂತದ ನಗರಗಳಲ್ಲಿ ದಾವಣಗೆರೆ ಆಯ್ಕೆಯಾಗಿದ್ದು, ಕಾಮಗಾರಿಗೆ 2016-17ರಲ್ಲೇ 398 ಕೋಟಿ ರೂ. ಬಿಡುಗಡೆಯಾಗಿದೆ. ರಾಜ ಕಾಲುವೆ, ಸ್ಮಾರ್ಟ್ ರೋಡ್, ಸಿಸಿ ಕ್ಯಾಮೆರಾ, ಸ್ಮಾರ್ಟ್ ಬಸ್ಟಾಂಡ್, ಸ್ಮಾರ್ಟ್ ಆಟೋ, ಸ್ಮಾರ್ಟ್ ಲೈಟಿಂಗ್, ಸಾರ್ಟ್ ಬೋರ್ಡ್ ಹೀಗೆ ಹತ್ತು ಹಲವು ಕೆಲಸಗಳು ಸ್ಮಾರ್ಟ್ ಸಿಟಿಯಲ್ಲಿ ಆಗುತ್ತಿದೆ. ಈ ಎಲ್ಲ ಕೆಲಸಗಳಲ್ಲಿ ಎಂಜಿನಿಯರ್ ಪಾತ್ರ ಅಪಾರವಾಗಿದೆ.
ಅಭಿವೃದ್ದಿ ಮತ್ತು ಮನವಿ
ಸ್ಮಾರ್ಟ್ ಸಿಟಿ ಯೋಜನೆಯಅಡಿಯಲ್ಲಿ ಒಂದನೇ ಹಂತದ ರಿಂಗ್ ರಸ್ತೆ ಮತ್ತು ರಿಂಗ್ ರಸ್ತೆಗೆ ಸೇರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮತ್ತು 2ನೇ
ಪಾದಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ
ಚಾಲನೆ ನೀಡಲಾಗಿದೆ. ಈ ಸಂಬಂಧ 600
ರಿಂದ 700 ಕೋಟಿ ಅನುದಾನಕ್ಕಾಗಿ
ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
“ಸ್ಮಾರ್ಟ್ ಸಿಟಿ ಕನಸು ಇನ್ನೂ 2 ವರ್ಷ ಗಳಲ್ಲಿ ಸುಮಾರು 1,150 ಕೋಟಿ ಹಣವನ್ನು ಖರ್ಚು ಮಾಡಿ ಸ್ಮಾರ್ಟ್ ಸಿಟಿಯ ಕನಸನ್ನು ನನಸು ಮಾಡಲಾಗುವುದು.”
| ಸಂಸದ ಜಿ.ಎಂ. ಸಿದ್ದೇಶ್ವರ
ಸುದ್ದಿದಿನ.ಕಾಂ|ವಾಟ್ಸಾಪ್|9980346243