ದಿನದ ಸುದ್ದಿ
ಒಡಂಬಡಿಕೆಗಾಗಿ ದಾವಣಗೆರೆ ವಿ.ವಿ ಗೆ ಫ್ರಾನ್ಸ್ ತಂಡ
ಸುದ್ದಿದಿನ,ದಾವಣಗೆರೆ : ಸಂಶೋಧನೆ, ಅಭಿವೃದ್ಧಿ ಯೋಜನೆ, ಅಧ್ಯಯನ ಸಂಯೋಜನೆ ಹಾಗೂ ಇನ್ನಿತರ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತ ಅಧ್ಯಯನ ವಿಭಾಗದ ಜೊತೆ ಒಡಂಬಡಿಕೆಗೆ ಮಾಡಿಕೊಳ್ಳುವ ಪೂರ್ವಭಾವಿ ಚರ್ಚೆಗಾಗಿ ಫ್ರಾನ್ಸ್‍ನ ಪ್ಯಾರಿಸ್ ಸ್ಯಾಕ್ಲೆ ವಿಶ್ವವಿದ್ಯಾಲಯದ ತಂಡವು ಫೆಬ್ರುವರಿ 11ರಂದು ಆಗಮಿಸಲಿದೆ.
ಒಡಂಬಡಿಕೆ ಮೂಲಕ ಉಭಯ ವಿಶ್ವವಿದ್ಯಾಲಯಗಳು ಜೊತೆಗೂಡಿ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು, ಪಿಎಚ್.ಡಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರ ಮತ್ತು ಪೂರಕ ಮಾರ್ಗದರ್ಶನ ನೀಡುವುದುಇತ್ಯಾದಿ ಸಾಮಾನ್ಯಕಾರ್ಯ ಯೋಜನೆಗಳ ಸಾಧ್ಯತೆಗಳ ಕುರಿತುಚರ್ಚೆ ನಡೆಸಲಿದೆ.
ಪ್ಯಾರಿಸ್ ಸ್ಯಾಕ್ಲೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ವರ್ಗಾವಣೆ ಮತ್ತು ಪರಿಸರ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ.ರೆಡಿಡ್ ಬೆನ್ಸೆರ್ ತಂಡದ ನೇತೃತ್ವ ವಹಿಸಲಿದ್ದು, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮತ್ತು ಕುಲಸಚಿವ ಬಸವರಾಜ ಬಣಕಾರ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಗಣಿತ ವಿಭಾಗದ ಅಧ್ಯಕ್ಷ ಪ್ರೊ. ಯು.ಎಸ್. ಮಹಾಬಲೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243