ದಿನದ ಸುದ್ದಿ

ದೀಪಗಳ ಹಬ್ಬ; ಬಾಳ್ವೆಯನು ಬೆಳಗಲಿ ಈ ಬೆಳಕು

Published

on

  • ಮೀನಾ ಆರ್, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ದೀಪಾವಳಿಯು ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿಯು ದೀಪದ ಹಬ್ಬವಾಗಿದ್ದು, ಇದನ್ನು ಬೆಳಕಿನ ಹಬ್ಬ ಎಂದು ಕೂಡ ಕರೆಯಲಾಗಿದೆ. ಹಾಗೂ ಜನರು ಇದನ್ನು ಯಾವುದೇ ಧರ್ಮ ಮತ್ತು ನಂಬಿಕೆಗಳನ್ನು ಲೆಕ್ಕಿಸದೆ ಆಚರಿಸುತ್ತಾರೆ. ಇಲ್ಲಿ ಮಕ್ಕಳ ಉತ್ಸಾಹವೇ ಹೆಚ್ಚಾಗಿರುತ್ತದೆ ಹಾಗಾಗಿ ಈ ಹಬ್ಬವು ಜನರಲ್ಲಿ ಸಂತೋಷ ಶಾಂತಿ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ನಮ್ಮ ಜೀವನದ ಕಷ್ಟಗಳನ್ನು ಕಳಿಸಿ ಬೆಳಕನ್ನು ತರಿಸುವ ಸಂಭ್ರಮವೇ ದೀಪಾವಳಿ ಮನೆಯ ಹಾಗೂ ಮನದ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ನಾವು ದೀಪಗಳನ್ನು ಹಚ್ಚುತ್ತೇವೆ.

ದೀಪಾವಳಿ ಅಕ್ಟೋಬರ್‌-ನವೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಹಬ್ಬದ ದಿನದಂದು ಎಲ್ಲೆಲ್ಲೂ ದೀಪಗಳ ಸಾಲುಗಳಿಂದ ಶೃಂಗಾರ ಗುಂಡ ಮನೆಗಳು ವಾತಾವರಣದ ಅಂದವನ್ನು ಹೆಚ್ಚಿಸುವಂತೆ ಅಲ್ಲಲ್ಲಿ ರಂಗೋಲಿಗಳು ಎಲ್ಲಾ ಕಡೆಗಳಿಂದಲೂ ಪಟಾಕಿಗಳ ಶಬ್ದ ಜನರು ತಮ್ಮ ಮನೆಗಳನ್ನು ದೀಪಗಳು, ಹೂಗಳು, ಮೇಣದ ಬತ್ತಿಗಳು ಮುಂತಾದವುಗಳಿಂದ ಅಲಂಕರಿಸುತ್ತಾರೆ.

ದೀಪಾವಳಿ ತಯಾರಿಯನ್ನು ಹಲವು ದಿನಗಳ ಮುಂಚಿತವಾಗಿಯೇ ಪ್ರಾರಂಭಿಸುತ್ತೇವೆ. ಹಬ್ಬದ ಮುಂಚೆ ಸಿಹಿ ತಿಂಡಿಗಳನ್ನು ತಯಾರಿಸುವುದು, ಹೊಸ ಬಟ್ಟೆಗಳನ್ನು ತಂದು ದೇವರ ಮುಂದಿಟ್ಟು ಪೂಜೆ ಮಾಡಿ ನಂತರ ಧರಿಸುವುದು ಕೆಲವು ಕಡೆ ವಾಡಿಕೆಯಾಗಿದೆ. ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಾರೆ.

ಮೀನಾ ಆರ್

ಲಕ್ಷ್ಮಿ ದೇವಿಯ ಪೂಜೆ ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂಬ ನಂಬಿಕೆ ಹಾಗೂ ದೀಪಾವಳಿಯಂದು ಗೋ ಪೂಜಾ ಅಂದರೆ, ಗೋವುಗಳನ್ನು ಅಲಂಕರಿಸಿ ಪೂಜೆಗಳನ್ನು ಅರ್ಪಿಸುತ್ತಾರೆ. ಇನ್ನು ದೀಪಾವಳಿಯನ್ನು ಬಹಳ ಪುರಾತನ ಕಾಲಗಳಿಂದಲೂ ಆಚರಿಸುತ್ತಾ ಬಂದಿದ್ದಾರೆ. ಐತಿಹಾಸಿಕವಾಗಿ ಹೇಳುವುದಾದರೆ ಹಿಂದೂ ಪುರಾಣಗಳ ಪ್ರಕಾರ ಸಮಗ್ರವಾದ ಅಯೋಧ್ಯೆಯ ಬಗ್ಗೆ ಇಲ್ಲಿ ವಿವರಗಳು ಕಂಡುಬರಲಿದೆ. ಎಂಬುದು ಇಲ್ಲಿನ ನಿವಾಸಿಗಳು ಅದನ್ನು ಆಚರಿಸಲು ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಎಣ್ಣೆಯ ದೀಪಗಳನ್ನು ಬೆಳಗಿಸಿದರು. ಅಂದು ಪ್ರಾರಂಭವಾದ ದೀಪಾವಳಿಯು ಇಂದಿಗೂ ವಿಜೃಂಭಣೆಯಿಂದ ಮುಂದುವರೆದಿದೆ ಎಂಬುದು ನಂಬಿಕೆ.

ದೀಪಾವಳಿವೆಂದು ಪಟಾಕಿಗಳನ್ನು ಹಚ್ಚುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದರಿಂದ ಹಾನಿಕಾರಕ ಅನಿಲಗಳು (CFC) ಬಿಡುಗಡೆಯಾಗುತ್ತದೆ. ಇದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಹಾಗೂ ನಮ್ಮ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ ಆಚರಣೆಯ ಹೆಸರಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಆಶಾ ಮಾಡೋದೇ ಮತ್ತು ಹೆಚ್ಚು ಪಟಾಕಿಗಳನ್ನು ಹಚ್ಚದೆ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಬೇಕು.

ನಮ್ಮೊಳಗಿನ ಕತ್ತಲೆಯನ್ನು ಹೋಗಲಾಡಿಸಿ ಇಡೀ ಜಗತ್ತನ್ನು ಬೆಳಗಿಸುವ ಹಬ್ಬವೇ ದೀಪಾವಳಿ ಹೀಗೆ ಎಲ್ಲರ ಜೀವನದಲ್ಲಿಯೂ ಕತ್ತಲೆಯು ಮರೆಯಾಗಿ ಬೆಳಕು ಮೂಡಲಿ ಎಂದು ಹೇಳುತ್ತಾ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version