ದಿನದ ಸುದ್ದಿ

ದೆಹಲಿಯ ಹೈಫೈ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಸುದ್ದಿದಿನ, ಬೆಂಗಳೂರು : ದೆಹಲಿಯಿಂದ ಸಿಲಿಕಾನ್ ಸಿಟಿಗೆ ಬರ್ತಾನೆ ಈ ಹೈಫೈ ಐನಾತಿ ಕಳ್ಳ. ವಿಮಾನದಲ್ಲೇ ಇವನ ಓಡಾಟವೆಲ್ಲವಾಗಿದ್ದು, ಕಳ್ಳತನ ಮುಗಿದ ಮೇಲೆ ಸಿಮ್ ಚೇಂಜ್ ಮಾಡ್ತಿದ್ದ. ದೆಹಲಿಯ ಚೋರ್ ಬಜಾರ್ ನಿಂದ ಬರ್ತಿದ್ದ ಖತರ್ನಾಕ್ ಚೋರ್ ನನ್ನು ದೆಹಲಿಯ ಈ ಹೈಫೈ ಕಳ್ಳ ಹರ್ಮಾನ್ ಖಾನ್ ಅಲಿಯಾಸ್ ಸೋನು ನನ್ನು ಬಂಧಿಸಿದ್ದಾರೆ ಜೀವನ್ ಭೀಮಾ ನಗರ ಪೊಲೀಸರು.

ಮನೆ ಡೋರ್ ಲಾಕ್ ಹಾಕಿದ್ರೆ ಐದಾರು ಸಲ ಕಾಲಿಗ್ ಬೆಲ್ ರಿಂಗ್ ಮಾಡ್ತಿದ್ದ ಈತ, ಮನೆ ಬಾಗಿಲು ತೆರೆಯಲಿಲ್ಲವಾದ್ರೆ ಕ್ಷಣಮಾತ್ರದಲ್ಲೇ ಕಳ್ಳನ ಕೈಚಳಕ ಸ್ಟಾರ್ಟ್ ಆಗ್ತಿತ್ತು. ನಂತರ ಮನೆ ಬಾಗಿಲು ತೆರೆದು ಚಿನ್ನ ಬೆಳ್ಳಿಯನ್ನೇಲ್ಲಾ ಕದ್ದೊಯ್ತಿದ್ದ. ದೆಹಲಿಯಿಂದ ಚೆನ್ನೈಗೆ ವಿಮಾನದಲ್ಲಿ ಜರ್ನಿ ಮಾಡ್ತಾ ಚನ್ನೈನಿಂದ ಕಾರಿನಲ್ಲೇ ಬೆಂಗಳೂರಿಗೆ ಎಂಟ್ರಿ ಕೊಡ್ತಿದ್ದ ಈ ಕಳ್ಳ. ಹೊಸೂರು ಬಳಿ ಮಾಡ್ತಿದ್ದ ಹೈಫೈ ರೂಮ್ ಮಾಡಿಕೊಂಡು ದಿನಕ್ಕೊಂದು ಏರಿಯಾ ಫಿಕ್ಸ್ ಮಾಡ್ಕೊತಿದ್ದ. ಕಣ್ಣಿಟ್ಟ ಮನೆ ಬಾಗಿಲು ಹೊಡೆಯದೇ ಬಿಡ್ತಿರ್ಲಿಲ್ಲ ಕಳ್ಳ ಹರ್ಮಾನ್ ಖಾನ್. ಕೊನೆಗೂ ಈ ಕಳನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿ ಬಂಧಿಸಿದ್ದಾರೆ ಜೀವನ್ ಭೀಮಾ ನಗರ ಪೊಲೀಸರು.

ಸಿಮ್ ಲೋಕೇಷನ್ ಮೂಲಕ ಚೆನ್ನೈ, ಪುಣೆಗೆ ತಲುಪಿ್ಧದ್ದ ಈತನನ್ನು ದೆಹಲಿ ತಲುಪುವ ಮೊದಲೇ ಪೊಲೀಸರು ಬಂಧಿಸಿದ್ದಾರೆ. ಕಳ್ಳ ಹರ್ಮಾನ್ ಖಾನ್ ನಿಂದ ಕೆಜಿಗಟ್ಟಲೇ ಚಿನ್ನ ವಶಕ್ಕೆ ಪಡೆದಿದ್ದಾರೆ. ಕದ್ದ ಚಿನ್ನವನ್ನೇಲ್ಲಾ ಕಳ್ಳ ದೆಹಲಿಯ ಚೋರ್ ಬಜಾರ್ ನಲ್ಲಿ ಮಾರಾಟ ಮಾಡ್ತಿದ್ದ. ಚಿನ್ನವನ್ನ ರಿಸೀವ್ ಮಾಡ್ತಿದ್ದ ಐವರನ್ನು ತನಿಖೆ ನಡೆಸುತ್ತಿರುವ ಭೀಮಾನಗರದ ಪೊಲೀಸರು.

ಸುದ್ದಿದಿನ.ಕಾಂ|ವಾಟ್ಸಾಪ್|9886715401

Leave a Reply

Your email address will not be published. Required fields are marked *

Trending

Exit mobile version