ಸಿನಿ ಸುದ್ದಿ
ಫಹಾದ್ ಫಾಸಿಲ್ ಜೊತೆಗೆ ‘ಲೂಸಿಯಾ’ ಪವನ್ ಹೊಸ ಚಿತ್ರ ‘ಧೂಮಂ’
ಸುದ್ದಿದಿನ ಡೆಸ್ಕ್ : ‘ಲೂಸಿಯಾ’ ( Lucia ) ಖ್ಯಾತಿಯ ಪವನ್ ಕುಮಾರ್ ( Pawan Kumar ), ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ( Fahad Faasil) ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಸಾಧ್ಯತೆ ಇದೆ ಎಂಬ ಮಾತು ಇತ್ತೀಚೆಗೆ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ಶುಕ್ರವಾರ ಫಹಾದ್ ಫಾಸಿಲ್ ಅಭಿನಯದಲ್ಲಿ ಪವನ್ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ.
ಅದೇ ‘ಧೂಮಂ’.‘ಧೂಮಂ’ ಚಿತ್ರವನ್ನು ನಿರ್ಮಿಸುತ್ತಿರುವುದು ಹೊಂಬಾಳೆ ಫಿಲಂಸ್. ಇದಕ್ಕೂ ಮುನ್ನ ಪವನ್ ನಿರ್ದೇಶನದಲ್ಲಿ, ಪುನೀತ್ ರಾಜ್ಕುಮಾರ್ ಅಭಿನಯದಲ್ಲಿ ‘ದ್ವಿತ್ವ’ ಎಂಬ ಚಿತ್ರವನ್ನು ಘೋಷಿಸಿದ್ದರು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು. ಆದರೆ, ಪುನೀತ್ ನಿಧನದಿಂದ ಅದು ಸಾಧ್ಯವಾಗಲಿಲ್ಲ.
ಅದರ ಬದಲು ಅವರು ಪವನ್ಗೆ ‘ಧೂಮಂ’ ನಿರ್ದೇಶಿಸುವ ಅವಕಾಶವನ್ನು ಕೊಟ್ಟಿದ್ದಾರೆ. ‘ಧೂಮಂ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಮಲಯಾಳಂನಲ್ಲಿ ನಿರ್ಮಾಣವಾಗಿ, ಕನ್ನಡ, ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಫಹಾದ್ಗೆ ನಾಯಕಿಯಾಗಿ ಅಪರ್ಣ ಬಾಲಮುರಳಿ ನಟಿಸುತ್ತಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತ ಈ ಚಿತ್ರಕ್ಕಿದೆ.
What you sow, so shall you reap.#Dhoomam Kickstarting from Oct 9, 2022, Summer 2023 Release.@twitfahadh @pawanfilms @VKiragandur @aparnabala2 @hombalefilms @vjsub @Poornac38242912 #PreethaJayaraman @roshanmathew22 @ChaluveG @Karthik1423 @AneesNadodi @suresh_656 @DhoomamFilm pic.twitter.com/aniiDvWYw1
— Pawan Kumar (@pawanfilms) September 30, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243