ದಿನದ ಸುದ್ದಿ
‘ಅಮಿನ್ ಮಟ್ಟು’ ಬೆನ್ನಿಗೆ ನಿಂತ ಪ್ರಗತಿಪರರು
ಸುದ್ದಿದಿನ,ಬೆಂಗಳೂರು : ಚಿಂತಕ ದಿನೇಶ್ ಅಮಿನ್ ಮಟ್ಟು ಅವರು ರೋಹಿತ್ ಚಕ್ರತೀರ್ಥ ಎಂಬ ಬರಹಗಾರನ್ನು ಹತ್ಯೆಮಾಡಲು ದಲಿತ ಮುಖಂಡ ನೆನಿಸಿಕೊಂಡಿರುವ ಭಾಸ್ಕರ್ ಪ್ರಸಾದ್ ಎಂಬ ವ್ಯಕ್ತಿಗೆ ಸುಪಾರಿ ಕೊಟ್ಟಿದ್ದರು ಎಂಬ ಸುದ್ದಿ ಶುದ್ದ ಸುಳ್ಳು ಎಂದು ಬೆಂಗಳೂರು ನಗರ ಪೋಲಿಸ್ ಆಯುಕ್ತರಿಗೆ ಸೋಮವಾರ (ಇಂದು) ಪ್ರಗತಿಪರ ಚಿಂತಕರು ಪತ್ರಿಕಾ ಹೇಳಿಕೆ ನೀಡಿ ಮನವಿಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವಾಗಿ ಮನಸೋ ಇಚ್ಛೆ ಚರ್ಚೆಗಳು ನಡೆಯುತ್ತಿದ್ದು , ಮುಂದೆ ಈ ವಿಷಯ ಸಮಾಜದಲ್ಲಿನ ಶಾಂತಿ ಕದಡುವ ಪ್ರಸಂಗಗಳನ್ನುಎದುರಿಸುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಈ ಸುಳ್ಳು ಆರೋಪದ ಬಗ್ಗೆ ಡಿಜೆಹಳ್ಳಿ ಪೋಲಿಸ್ ಠಾಣೆಯಲ್ಲಿ ಚಿಂತಕ ಅಮಿನ್ ಮಟ್ಟು ದಾಖಲಿಸಿರುವ ಪ್ರಕರಣದ ತನಿಖೆ ಪಾರದರ್ಶಕವಾಗಿರ ಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.
ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೆಲವು ಬಲಪಂಥೀಯರು ಬಂಧನವಾಗುತ್ತಿರುವ ಈ ಸಮಯದಲ್ಲಿ, ಇಂತಹ ಸುಳ್ಳು ಆರೋಪಗಳು ವಿಚಾರವಾದಿಗಳನ್ನ ಇಕ್ಕಟ್ಟಿಗೆ ಸಿಲುಕಿಸುವ ಕುತಂತ್ರ ಇದಾಗಿದ್ದು, ಜನಪರ ಚಳುವಳಿಗಳನ್ನ ದಿಕ್ಕು ತಪ್ಪಿಸುವ, ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸೂಕ್ತ ನಿಗಾವಹಿಸುವಂತೆ ಕೋರಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಹೋರಾಟಗಾರ್ತಿ ಕೆ.ಎಸ್.ವಿಮಲ ಸೇರಿದಂತೆ ಹಲವು ಹೋರಾಟಗಾರರು, ಪ್ರಗತಿಪರ ಚಿಂತಕರು, ಪತ್ರಕರ್ತರು, ಹಾಜರಿದ್ದರು.