ರಾಜಕೀಯ
ಬಿಜೆಪಿಯವರು ಈ ಸರ್ಕಾರ ಬೀಳಿಸೋಕೆ ಇದೇನು ಮಡಿಕೆಯಲ್ಲ : ಡಿ.ಕೆ.ಶಿ ಕಿಡಿ
ಸುದ್ದಿದಿನ, ಬೆಂಗಳೂರು : ಬಿಜೆಪಿಯವರು ಈ ಸರ್ಕಾರ ಬೀಳಿಸೋಕೆ ಇದೇನೂ ಮಡಿಕೆ ಅಲ್ಲ.ಐದು ವರ್ಷ ನಾನು ಯಾರ ಕಾಲನ್ನು ಎಳೆಯಲ್ಲ.ಈ ಸರ್ಕಾರ ಐದು ವರ್ಷ ಪೂರೈಸಲಿದೆ.
ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರ ಬೆನ್ನ ಹಿಂದೆ ನಾಲ್ಕೂವರೆ ವರ್ಷ ಕಲ್ಲುಬಂಡೆಯಂತಿದ್ದೆ, ಈಗಲೂ ಕೂಡ.ಲೇವಾದೇವಿ ಬಗ್ಗೆ ಸುಗ್ರೀವಾಜ್ಞೆ ವಿಚಾರ ಬಹಳ ಜನರನ್ನ ನಾವು ರಕ್ಷಣೆ ಮಾಡಬೇಕಿತ್ತು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿತ್ತು. ಸರ್ಕಾರಕ್ಕೆ ಕಮಿಟ್ಮೆಂಟ್ ಇದೆ. ಕಾಂಗ್ರೆಸ್ ,ಜೆಡಿಎಸ್ ಸರ್ಕಾರ ನಿರ್ಧಾರ ಮಾಡಿದೆ.ಈ ಬಗ್ಗೆ ವ್ಯಾಪಕ ಚರ್ಚೆ ಬಳಿಕ ಈ ನಿರ್ಧಾರ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಕ್ಯಾಬಿನೆಟ್ ನಿರ್ಧಾರವನ್ನ ಕಳುಹಿಸಿದ್ದೇವೆ ಎಂದು ಹೇಳಿದರು.
ಸರ್ಕಾರದಲ್ಲಿ, ಸಚಿವರಲ್ಲಿ ಭಿನ್ನಾಭಿಪ್ರಾಯ ಇಲ್ಲ.
ಸರ್ಕಾರ ರೈತರಿಗೆ ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡಿದ್ದೇವೆ. ದೊಡ್ಡ ದೊಡ್ಡ ಉದ್ಯಮಿಗಳ, ವ್ಯಾಪಾರಿಗಳ ಸಾಲವನ್ನ ಒಂದೇ ದಿನದಲ್ಲಿ ಮನ್ನಾ ಮಾಡ್ತಾರೆ. ಆದೇ ರೀತಿ ರೈತರ ಸಾಲವನ್ನೂ ಮನ್ನಾ ಮಾಡಲಿ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.