ದಿನದ ಸುದ್ದಿ

ಚನ್ನಗಿರಿ | ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಎ.ಆರ್.ಟಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಚನ್ನಗಿರಿ ಇಲ್ಲಿ ಖಾಲಿ ಇರುವ 1 ವೈದ್ಯಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಮುಖ್ಯ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯುತ್ತದೆ. ಪತ್ರಿಕೆಯಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 7 ದಿನಗಳೊಳಗೆ ಅರ್ಜಿಗಳನ್ನು ಎ.ಆರ್.ಟಿ ಕೇಂದ್ರದ ರೂಂ.ನಂ 24 ರಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯೊಳೆಗೆ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸುವವರು ಎಲ್ಲಾ ಶೈಕ್ಷಣಿಕ ದಾಖಲಾತಿಗಳ ಮೂಲ ಪ್ರತಿಗಳು ಹಾಗೂ 2 ಪ್ರತಿ ಜೆರಾಕ್ಸ್ ಪ್ರತಿಗಳನ್ನು, ಇತ್ತೀಚಿನ ಪಾಸ್‍ಪೋರ್ಟ್ ಸೈಜಿನ 2 ಭಾವಚಿತ್ರಗಳನ್ನು ತರಬೇಕು ಹಾಗೂ ಅರ್ಜಿ ಅಲ್ಲಿಸುವವರು 65 ವರ್ಷ ವಯೋಮಿತಿ ಮೀರಿರಬಾರದು.

ನೇಮಕಾತಿ ನಿಯಮಾನುಸಾರ ನಡೆಸಲಾಗುವುದು ಹಾಗೂ ನೇಮಕಾತಿ ಸಮಿತಿಯ ನಿರ್ಧಾರವೇ ಅಂತಿಮ ನಿರ್ಧಾರವಾಗಿರುತ್ತದೆ ಎಂದು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದ ನೋಡಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version