ದಿನದ ಸುದ್ದಿ

ದೊಡ್ಡಘಟ್ಟ | ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ವಸತಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

Published

on

ಸುದ್ದಿದಿನ, ಚನ್ನಗಿರಿ: ತಾಲೂಕಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ವಸತಿ ಪ್ರೌಢಶಾಲೆ ದೊಡ್ಡಘಟ್ಟ. 1998-99 ನೇ ಸಾಲಿನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಬಳಗದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ.5 ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ದಿವಂಗತರಾಗಿದ್ದ ಸಿ.ತಿಪ್ಪಣ್ಣ, ಮರಿಸ್ವಾಮಿ, ವೀರಾಂಜನೇಯ.ರಾಮಣ್ಣ.ಹಾಗೂ ವಿದ್ಯಾರ್ಥಿ
ಡಿ.ಆರ್.ಮಂಜುನಾಥ್ ಇವರಿಗೆ ಮೌನಾಚರಣೆ ಮಾಡಿ ನಮನ ಸಲ್ಲಿಸಲಾಯಿತು.

ನಂತರ ಕಾರ್ಯಪ್ರಮವನ್ನು ನಿವೃತ್ತ ಮೂಖೋಪಧ್ಯಾಯರಾದ ಎಲ್,ಈ.ಸಿದ್ದಯ್ಯ ಉದ್ಘಾಟಿಸಿ ಮಾತನಾಡಿ ಚವರ್ಷಗಳ ನಂತರ ವಿದ್ಯಾರ್ಥಿಗಳು ನಮ್ಮನ್ನ ಗೌರವಿಸುತ್ತಿರುವುದು ಸಂತೋಷ ತಂದಿದೆ.ಒಬ್ಬ ಶಿಕ್ಷಕನಿಗೆ ಇದಕ್ಕಿಂತ ಹೆಚ್ಚು ಸಾರ್ಥಕ ಎನಿಸುವ ವಿಷಯ ಇನ್ನೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಿವೃತ್ತ ಪ್ರಾದ್ಯಾಪಕ ಹಾಗೂ ಸಾಹಿತಿ ಡಾ. ಎ.ಬಿ.ರಾಮಚಂದ್ರಪ್ಪ ಅವರು ಮಾತನಾಡಿ ಶೈಕ್ಷಣಿಕ ಸಾರ್ಥಕತೆ ನಗರಗಳಿಗಿಂತ ಹಳ್ಳಿಗಳಲ್ಲೇ ಹೆಚ್ಚು, ಈ ದೇಶವನ್ನು ಕಟ್ಟುವಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಹಳ್ಳಿಗಳಲ್ಲಿ ಬಡತನ ಹಸಿವು ದಾರಿದ್ರತೆ, ಅನಕ್ಷರತೆಗಳ ನಡುವಿನಿಂದ ಅಕ್ಷರ ಕಲಿತು ಮೇಲೆ ಬಂದವರಿಂದ ಅತ್ಯಂತ ಭೂನವೀಕರಣದ ದೇಶ ಕಟ್ಟಲು ಸಾರ್ಥಕವೆಂದು ಅಂಬೇಡ್ಕರ್ ಕನಸು ಕಂಡಿದ್ದರು, ಈ ಸಾಧ್ಯತೆಯನ್ನು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ವಸತಿ ಪ್ರೌಢಶಾಲೆ ಸಾರ್ಥಕ ಗೊಳಿಸಿದೆ ಎಂದರು.

ಸಾಹಿತಿ ಶಾಂತಗಂಗಾಧರ್ ಮಾತಾನಾಡಿ ವಿದ್ಯಾರ್ಥಿಗಳು ಮಾಡುತ್ತಿರುವ ಈ ಕಾರ್ಯಕ್ರಮ ಮಾದರಿಯಾಗಿದೆ.ಇಷ್ಟು ರ್ವಗಳ ನಂತರ ಎಲ್ಲರೂ ಸೇರಿ ತಮ್ಮ ಶಿಕ್ಷಕರನ್ನ ಗೌರವಿಸುತ್ತಿರುವುದು ಶ್ಲಾಗನೀಯ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಎಲ್.ಈ.ಸಿದ್ದಯ್ಯ, ಎಂ.ವಿ.ಈಶ್ವರಯ್ಯ, ಕೆ.ಗಂಗಪ್ಪಸಿ.ಬಿ.ಬೂದಿ ಬಸಪ್ಪ.ಕೆ.ಎಸ್.ಹಾಲಪ್ಪ, ಕೆ.ಸುರೇಶ್‌, ಎಸ್.ತಿಮ್ಮಯ್ಯ ಕೃಷ್ಣಮೂರ್ತಿ.ಎಸ್.ಪಿ. ಇವರಿಗೆ ಗುರುವಂದನೆ ಸಲ್ಲಿಸಲಾಯಿತು ಹಾಗೂ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

1998-99 ನೇ ಸಾಲಿನ ವಿದ್ಯಾರ್ಥಿಗಳು

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮುಖೋಪದ್ಯಾಯರಾದ ಸಿ.ಬಿ,ಬೂದಿ ಬಸಪ್ಪ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮದ ಜಯ್ಯಪ್ಪ.ಡಿ.ಎಂ. ಶಿವಮೂರ್ತೃಪ್ಪ ಡಿ.ಆರ್. ಬಿ.ವಿ. ಶ್ರೀನಿವಾಸ್ ಶೇಖರಪ್ಪ ಆರ್. ಇದ್ದರು.

1998-99ನೇ ಸಾಲಿನವಿದ್ಯಾರ್ಥಿ ಬಳಗದವರು ನಾಡಗೀತೆ ಹಾಡಿದರು. ಮಲ್ಲಿಕಾರ್ಜುನ.ಎಂ.ಸ್ವಾಗತಿಸಿದರು. ಮಂಜುನಾಥ.ಹೆಚ್,ವಂದಿಸಿದರು.ಸನಾವುಲ್ಲ.ಡಿ, ಕಾರ್ಯಕ್ರಮ ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version