ಲೈಫ್ ಸ್ಟೈಲ್
ರೆಸಿಪಿ | ‘ದೂದ್ ಪೇಡ’ ಮಾಡೋದು ಹೀಗೆ
ಬೇಕಾಗುವ ಪದಾರ್ಥಗಳು
- ಮಿಲ್ಸ್‌ಮೇಡ್ – 400 ಗ್ರಾಂ,
- ಹಾಲಿನ ಪುಡಿ – 200 ಗ್ರಾಂ,
- ತುಪ್ಪ – 1 ಕಾಲು ಕಪ್
- ಹಾಲು – 4 ಚಮಚ
- ಕೇಸರಿ ದಳ – ಸ್ವಲ್ಪ
ತಯಾರಿಸುವ ವಿಧಾನ
ಹಾಲು ಬಿಸಿ ಮಾಡಿ ಅದರಲ್ಲಿ ಕೇಸರಿ ದಳ ಹಾಕಿ ಬದಿಗಿಡಿ, ತುಪ್ಪ ಹಾಕಿ ಬಿಸಿ ಮಾಡಿ ಇಳಿಸಿ. ಬಳಿಕ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಹಾಲಿನ ಪುಡಿ ಸೇರಿಸಿ ಬೆರೆಸಿ. ಓವನ್‌ನಲ್ಲಿ ಎರಡು ನಿಮಿಷ ಬಿಸಿ ಮಾಡಿ. ಈ ಮಿಶ್ರಣಕ್ಕೆ ಹಾಲಲ್ಲಿ ಕದಡಿದ ಕೇಸರಿ ದಳ ಹಾಕಿ ಚೆನ್ನಾಗಿ ಬೆರೆಸಿ. ಪುನಃ ಎರಡು ನಿಮಿಷ ಓವನ್‌ನಲ್ಲಿಟ್ಟು ಬಿಸಿ ಮಾಡಿ, ಬಿಸಿ ಇರುವಾಗಲೇ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ದೂದ್‌ಪೇಡಾಗಳನ್ನು ತಯಾರಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243