ದಿನದ ಸುದ್ದಿ
ಭಾರತದ ಮೊತ್ತಮೊದಲ ವ್ಯಕ್ತಿ | ದಲಿತ ಯುವತಿ ಡಾ.ಕೆ.ಪಿ. ಅಶ್ವಿನಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ” ಸದಸ್ಯೆಯಾಗಿ ಆಯ್ಕೆ
ಸುದ್ದಿದಿನ ಡೆಸ್ಕ್ : ದಲಿತ ಯುವತಿ ಡಾ.ಕೆ.ಪಿ. ಅಶ್ವಿನಿ ರವರು “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ” ಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
UNHRC. “United nations human rights council” ಗೆ ಸದಸ್ಯರಾಗಿ ಆಯ್ಕೆಯಾದ ಭಾರತದ ಮೊದಲ ಪ್ರಜೆ ಡಾ. ಅಶ್ವಿನಿ.ಕೆ.ಪಿ. ಮೌಂಟ್ ಕಾರ್ಮೆಲ್ ನಲ್ಲಿ ಪದವಿ ಪಡೆದು, ಸೇಂಟ್ ಜೋಸೆಫ್ ನಲ್ಲಿ ಮಾಸ್ಟರ್ಸ್ ಮಾಡಿ, JNU ನಲ್ಲಿ Master of philosophy ಮತ್ತು South Asian studies ವಿಷಯವನ್ನು ಆಯ್ದುಕೊಂಡು ದಲಿತ ಮಾನವ ಹಕ್ಕುಗಳ ಮೇಲೆ PHD ಯನ್ನು ಪಡೆದಿದ್ದಾರೆ.
ಮಾನವ ಹಕ್ಕುಗಳ ಬಗ್ಗೆ ಸುಮಾರು 150 ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ‘Amnesty international’ ಸಂಸ್ಥೆಯಲ್ಲಿಯೂ ತಮ್ಮ ಸೇವೆ ಸಲ್ಲಿಸಿರುತ್ತಾರೆ. ಇವೆಲ್ಲದರ ಆಧಾರದ ಮೇಲೆ ಪ್ರಪಂಚದ ಒಟ್ಟು 12 ಜನರನ್ನು Shortlist ಮಾಡಲಾಗಿತ್ತು ಅದರಲ್ಲಿ ಭಾರತದಿಂದ ಸ್ವತಂತ್ರ ಪ್ರಜೆಯಾಗಿ ಹಾಗೂ UNHRC ಗೆ ಭಾರತದಿಂದ ಮೊಟ್ಟ ಮೊದಲು ಆಯ್ಕೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243