ದಿನದ ಸುದ್ದಿ
“ಕೃತಜ್ಞತೆ” ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಪಾಠ
- ರಘೋತ್ತಮ ಹೊ.ಬ
1951ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಹಿಂದೂ ಕೋಡ್ ಬಿಲ್ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೆ ಮುಂಬಯಿ ಕಾಂಗ್ರೆಸ್ ಮುಖಂಡರಾದ ಎಸ್.ಕೆ.ಪಾಟೀಲ್ ರವರು “ತಮ್ಮ ಶಿಫಾರಸ್ಸು ಮೂಲಕ ಡಾ.ಅಂಬೇಡ್ಕರ್ ರವರು ಮಂತ್ರಿಯಾದರು.
ಆದರೆ ಈಗ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಡಾ.ಅಂಬೇಡ್ಕರ್ ರಿಗೆ ಒಂಚೂರು ಕೃತಜ್ಞತೆ ಇಲ್ಲ” ಎಂದು ಬಾಬಾಸಾಹೇಬರ ಮೇಲೆ ಆರೋಪ ಹೊರಿಸುತ್ತಾರೆ.
ಅದಕ್ಕೆ ಬಾಬಾಸಾಹೇಬ್ ರವರು “ಕೃತಜ್ಞತೆ ಎಂಬ ವಿಷಯದಲ್ಲಿ ಪಾಟೀಲ್ ರು ತಮಾಷೆ ಮಾಡಿರಬಹುದು” ಎನ್ನುತ್ತಾ ಕೃತಜ್ಞತೆ ಬಗ್ಗೆ ಹೇಳುವುದು “ತನ್ನ ಗೌರವದ ಬೆಲೆತೆತ್ತು ಯಾವುದೇ ಮನುಷ್ಯ ಮತ್ತೊಬ್ಬರಿಗೆ ಕೃತಜ್ಞನಾಗಿರಲು ಸಾಧ್ಯವಿಲ್ಲ.
ತನ್ನ ಶೀಲದ ಬೆಲೆತೆತ್ತು ಯಾವುದೇ ಮಹಿಳೆ ಮತ್ತೊಬ್ಬರಿಗೆ ಕೃತಜ್ಞಳಾಗಿರಲು ಸಾಧ್ಯವಿಲ್ಲ. ಹಾಗೆಯೇ ತನ್ನ ಸ್ವಾತಂತ್ರ್ಯದ ಬೆಲೆತೆತ್ತು ಯಾವುದೇ ರಾಷ್ಟ್ರ ಮತ್ತೊಂದಕ್ಕೆ ಕೃತಜ್ಞವಾಗಿರಲು ಸಾಧ್ಯವಿಲ್ಲ” ಎಂದು.
ಬಾಬಾಸಾಹೇಬ್ ಅಂಬೇಡ್ಕರರ ಈ ಹೇಳಿಕೆಯಂತೆ ಕೆಲವೊಮ್ಮೆ ನಾವು ಕೂಡ ನಮಗೆ ಸಹಾಯ ಮಾಡಿದವರಿಗೇ ಕೃತಘ್ನರಾಗಿ ನಡೆದುಕೊಳ್ಳುತ್ತೇವೆ. ಅಂದಹಾಗೆ ನಮ್ಮ ಆ ವರ್ತನೆಗೆ ಬಾಬಾಸಾಹೇಬರ ವಿವರಣೆಯಂತೆ ಅಂತಹವರಿಂದ
ನಮಗೆ ಸಂದಿರುವ ಅಗೌರವ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243