ಬಹಿರಂಗ

ಪ್ರಸ್ತುತವಾಗಿ ಅಂಬೇಡ್ಕರ್ ಮತ್ತು ಜಾತಿಭಯೋತ್ಪಾದನೆಗೆ ದಲಿತರ ಮಾರಣಹೋಮ

Published

on

ನನ್ನ ಅಂತರಾಳದ ನೋವು ಮತ್ತು ದುಃಖವನ್ನು ನೀವು ಅರಿಯಲಾರಿರಿ.ನನ್ನ ಜನ ರಾಜಕೀಯ ಅಧಿಕಾರವನ್ನು ಬೇರೆ ಸಮುದಾಯದವರೊಡನೆ ಸಮನಾಗಿ ಹಂಚಿಕೊಂಡು ಆಳುವ ವರ್ಗವಾಗುವುದನ್ನು ನಾನು ನನ್ನ ಜೀವಿತದಲ್ಲಿ ನೋಡಬೇಕೆಂದು ಇಚ್ಚಿಸಿದ್ದೆ.ಆದರೆ ಅದು ಸಾಧ್ಯವಾಗದು ಎನಿಸುತ್ತಿದೆ.ನನ್ನ ಹೋರಾಟದ ಫಲವನ್ನು ಕೆಲವು ಮಂದಿ ಅನುಭವಿಸುತ್ತಾ ಸಮುದಾಯದ ಹಿತವನ್ನು ಮರೆಯುತಿದ್ದಾರೆ.ನನ್ನ ಅವಿಧ್ಯವಂತರ ಜನರ ಗತಿ ಏನೆಂದು ನೆನೆದು ನೊಂದಿದ್ದೇನೆ.

ನಾನು ಈವರೆಗೆ ಏನನ್ನು ಸಾಧಿಸಿದ್ದೇನೊ ಅವೆಲ್ಲವನ್ನು ಘೋರವಾದ ನೋವು ಹಾಗು ಕೊನೆಯೆ ಇಲ್ಲದ ಕಷ್ಟಗಳ ಹಾದಿಯಲ್ಲಿ ಜೀವಿತದ್ದುಕ್ಕು ವಿರೋಧಿಗಳೊಡನೆ ಹೋರಾಡುತ್ತಾ ಸಧಿಸಿದ್ದೇನೆ.ಇದನ್ನು ನನ್ನ ಜನರಿಗೆ ಹೇಳು ನಾನಕ್ ಚಂದು..ತುಂಬಾ ಶ್ರಮವಹಿಸಿ ಈ ವಿಮೋಚನ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ.ಎಷ್ಟೆ ಅಪಾಯ ಅಡೆತಡೆಗಳು ಬಂದರು ಅದು ಹಾಗೆ ಮುಂದೆ ಸಾಗಲಿ ಒಂದು ವೇಳೆ ಮುಂದಕ್ಕೆಳೆಯಲು ಶಕ್ತಿ ಇಲ್ಲದಿದ್ದರೆ ಅಲ್ಲಿಯೆ ಬಿಟ್ಟುಬಿಡಿ ಆದರೆ ಯಾವುದೆ ಕಾರಣಕ್ಕು ಹಿಂದಕ್ಕೆ ತಳ್ಳಬೇಡಿ ಬಹಶಃ ನನ್ನ ಜನರಿಗೆ ಹೇಳುತ್ತಿರುವ ಕೊನೆಯ ಸಂದೇಶ ಇದಾಗಲಿದೆ.”

ಬಾಬಸಾಹೇಬರು ಜುಲೈ 31.1956 ಸಂಜೆ 5 ಗಂಟೆಯಲ್ಲಿ ಜೊತೆಯಲ್ಲಿದ್ದ ತಮ್ಮ ಆಪ್ತರಾದ ನಾನಕ್ ಚಂದು ರತ್ತುರವರೊಡನೆ ತಬ್ಬಿಕೊಂಡು ಹಂಚಿಕೊಂಡ ಕಣ್ಣೀರಿನ ಕೊನೆಯ ಸಂದೇಶ.

ಅಬ್ಬಾ..!ಬಾಬಸಾಹೇಬರ ಮಾತುಗಳು ಎದೆಯೊಳಗೆ ಬೆಂಕಿಜ್ವಾಲೆಯಗಿ ಕಣ್ಣಲ್ಲಿ ನೀರುತರಿಸುತ್ತದೆ.ಆಗಾದರೆ ಈ ಮಹಾನ್ ವ್ಯಕ್ತಿ ಅದೇಕೆ ಕಣ್ಣೀರಿಟ್ಟರು..? ಆ ವಿಮೋಚನಾ ರಥ ಯಾವುದು..?ಪ್ರಶ್ನೆಯನ್ನು ದಲಿತರು ಇಂದು ಆಳವಾಗಿ ಅರ್ಥೈಸಿಕೊಳ್ಳಬೇಕಾಗಿದೆ.
ಇವತ್ತು ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ಮೇಲಿ ಕ್ರೌರ್ಯವನ್ನು ಕಂಡು ಅಂದೆ ಬಾಬಸಾಹೇಬರು ಕಣ್ಣೀರಾಕಿರಬಹುದು ಎಂದು ನನಗನಿಸುತ್ತಿದೆ.

ಬಹುಜನಶೋಷಿತ ಜನರ ರಕ್ಷಣೆಯ ಸಂಪೂರ್ಣ ಜವಬ್ದಾರಿಯನ್ನು ದಲಿತ ನೌಕರರು.ರಾಜಕಾರಣಿಗಳು.ವಿದ್ಯಾರ್ಥಿಗಳ ಮೇಲೆ ಹಾಕಿದ್ದರು.ಇವರ ಮೇಲೆ ಬಾಬಸಾಹೇಬರು ತುಂಬಾನೆ ಭರವಸೆಯಿಟ್ಟಿದ್ದರು.ಆದರೆ ದುರಂತ ಅಂದರೆ ಬಾಬಸಾಹೇಬರ ಕನಸ್ಸನ್ನು ನನಸು ಮಾಡುತ್ತ ತಿದ್ದಿಬುದ್ದಿಹೇಳಬೇಕಿದ್ದ ದಲಿತ ನೌಕರರು ಸ್ವಾರ್ಥಿಗಳಾಗಿ ತಾವಾತು ತಮ್ಮ ಕುಟುಂಬವಾಯ್ತು ಎಂಬಂತಾಗಿದ್ದಾರೆ.

ಇನ್ನು ದಲಿತರ ಅಭಿವೃದ್ದಿಗೆ ಹಾಗು ಅವರ ರಕ್ಷಣೆಗೆ ಶಾಸನಸಭೆಗಳಲ್ಲಿ ಮಾತಾಡಬೇಕಿದ್ದ ದಲಿತರಾಜಕಾರಣಿಗಳು ಕೋಮುವಾದಿ ಹಾಗು ದಲಿತರನ್ನು ಕೇವಲ ಮತಬ್ಯಾಂಕಾಗಿಸಿದ ಪಕ್ಷಗಳಿಗೆ ಚಮಚಗಳಗಿ ಗುಲಾಮರಾಗಿದ್ದಾರೆ.ಆದರೆ ನೈಜ ಚರಿತ್ರೆಯನ್ನರಿತು ಚಳುವಳಿಯ ವಿಮೋಚನ ರಥವನ್ನು ಎಳೆಯಲು ಸೈನಿಕರಂತೆ ಸಜ್ಜಾಗಬೇಕಿದ್ದ ದಲಿತ ವಿಧ್ಯಾರ್ಥಿಗಳು ಬೇಜವಬ್ದಾರಿ ಮುರ್ಖರಾಗುತ್ತಿರಾಗಿ ಬದುಕುತ್ತಿದ್ದಾರೆ.ಹಾಗಾದರೆ ಕೋಟ್ಯಾಂತರ ಅನಕ್ಷರಸ್ಥ ಸಮುದಾಯ ದಿನನಿತ್ಯ ಅನುಭವಿಸುವ ನೋವು ದೌರ್ಜನ್ಯವನ್ನು ಖಂಡಿಸುವ ಪ್ರತಿರೋಧ ಒಡ್ಡುವ ಹಾಗು ಪರಿಹಾರ ಕಂಡುಕೊಳ್ಳುವರು ಯಾರು..?ಎಂಬ ಪ್ರಶ್ನೆ ದಲಿತರು ಸೂಕ್ಷ್ಮವಾಗಿ ಯೋಚಿಸಬೇಕಿದೆ.

ಪ್ರಸ್ತುತ ಕೋಮುರಾಜಕಾರಣದ ಎಂಜಲು ತಿನ್ನುಕಮಂಗಿಗಳನ್ನು ಸಮಾನ ಪರಂಪರೆಗೆ ಎಳೆದು ತರಬೇಕಿದೆ.ಬ್ರಾಹ್ಮಣೀಸಂ ಸಂರಕ್ಷಿಸುತ್ತಿರುವ ಒಬಿಸಿಗಳಿಗೆ ಅಂಬೇಡ್ಕರ್ ವಾದವನ್ನು ಮನದಟ್ಟು ಮಾಡುವ ತುರ್ತುಅಗತ್ಯವಿದೆ.ಏಕೆಂದರೆ ಜಾತಿಯೆಂಬ ಭಯೋತ್ಪಾದನೆಗೆ ಸೇರಿ ಉಗ್ರರಾಗುತ್ತಿರುವ ಹಿಂದುಳಿದವರಿಗೆ ತಾವು ಅನುಭವಿಸುತ್ತಿರುವ ಮೀಸಲಾತಿ ಹಾಗು ಸಂವಿಧಾನದ ಸವಲತ್ತುಗಳನ್ನು ಅರ್ಥೈಸಬೇಕಿದೆ.ಮಹಿಳೆಯರ ಮೇಲೆ ಗಧಪ್ರಹಾರ ಮಾಡುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ದೊಡ್ಡಮಟ್ಟದ ಚಳುವಳಿಯನ್ನು ರೂಪಿಸುಬೇಕಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಅಂಬೇಡ್ಕರ್ ರವರನ್ನು ಪ್ರತಿಯೊಬ್ಬ ಸ್ವಾಭಿಮಾನಿ ಭಾರತಿಯನಿಗೆ ಸಮಗ್ರವಾಗಿ ಅರ್ಥೈಸುವ ದರ್ದು ಹಿಂದೆಂದಿಗಿಂತಲು ಇಂದು ಅತ್ಯವಶ್ಯಕವಾಗಿದೆ.ಇಲ್ಲದಿದ್ದರೆ ಭಾರತದ ನಾಶಕ್ಕೆ ಟೊಂಕಕಟ್ಟಿ ನಿಂತಿರುವ ಜಾತಿವಾದಿ ಹಾಗು ಮನುವಾದಿಗಳ ಕ್ರೌರ್ಯಕ್ಕೆ ಅಂತ್ಯನೆ ಇಲ್ಲವಾಗುತ್ತದೆ.‌ ಗುಜರಾತಿನಲ್ಲಿ ಮುಸ್ಲಿಂರ ಹತ್ಯಯ ದಂಡಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಮುಸ್ಲಿಂ ಗರ್ಭಿಣಿರ ಹೊಟ್ಟೆಗೆ ತ್ರಿಶೂಲದಿಂದ ಗರ್ಭ ಸೀಳಿ ಭ್ರೂಣವನ್ನು ತೆಗೆದು ಹಿಂದುತ್ವದ ಭಯೋತ್ಪಾದನೆಗೆ ಭದ್ರಬುನಾದಿಹಾಕಿ.

ಈ ನೀಚ ಕಾರ್ಯಕ್ಕೆ ಬಹುಸಂಖ್ಯಾತ ಅಮಾಯಕ ದಲಿತ ಹಾಗು ಹಿಂದುಳಿದಯುವಕರ ತಲೆಗೆ ಹಿಂದುತ್ವದ ಅಮಲನ್ನು ತುಂಬಿ ಅಮಾಯಕರನ್ನು ಸಾಯುವವರೆಗು ಜೈಲಿನಲ್ಲಿ ಕೊಳೆಯುವಂತೆ ಮಾಡಿ ಕೇಸರಿ ಭಯೋತ್ಪಾದನೆಯ ಪಿತಾಮಹರೆನಿಸಿದ ಮೂದಿಯೆಂಬ ಮಂಕು ಬೂದಿ ಪ್ರಾಧಾನಿ ಆದಾಗಿನಿಂದಲು ದೇಶದಲ್ಲಿ ದಲಿತರ ಮೇಲೆ ಹಲ್ಲೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ. ದಲಿತರ ಕೇರಿಗೆ ನುಗ್ಗಿ ಹೊಡೆಯುವುದು.ನೀರು ಕೇಳಿದರೆ ಬಲವಂತವಾಗಿ ಮೂತ್ರ ಕುಡಿಸುವುದು.ಗೋಹತ್ಯ ನೆಪದಲ್ಲಿ ದಲಿತರನ್ನು ಕೊಲ್ಲುವುದು.

ಏಕಸಂಸ್ಕೃತಿ ವಿಸ್ತರಿಸಿ ಬಹುಸಂಸ್ಕೃತಿಯನ್ನು ದಿಕ್ಕರಿಸುವ.ಹೀನಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.ಇವುಗಳಿಗೆ ನೀರುಗೊಬ್ಬರಹಾಕಿ ಪೋಷಿಸುತ್ತಿರುವ ಆರ್.ಎಸ್.ಎಸ್.ಚೆಡ್ಡಿಗಳ ಲಾಜಿಕನ್ನು ನಿರ್ಮೂಲನೆ ಮಾಡಬೇಕಿದೆ.ಬುದ್ದ ಬಸವ ಅಂಬೇಡ್ಕರ್. ಪರಂಪರೆಯಿಂದ ಬಂದಿರುವ ದಲಿತರನ್ನು ದಿಕ್ಕುತಪ್ಪಿಸುವ ಹಾಗು ಇತಿಹಾಸವನ್ನು ತಿರುಚುವ ಹಿಂದುತ್ವದ ಬೆನ್ನುಮೂಳೆ ಮುರಿಯಬೇಕಿದೆ.ದೇಶಾದ್ಯಂತ ಘಟಿಸುತ್ತಿರುವ ಜಾತಿಭಯೋತ್ಪಾದನೆಯೆಂಬ ಹೆಮ್ಮರವನ್ನು ಅಂಬೇಡ್ಕರ್ ವಾದದಿಂದ ಬುಡಮಟ್ಟ ಕಿತ್ತೆಸೆಯಬೇಕಾಗಿದೆ.

ದಲಿತರ ಕೊರಳಲ್ಲಿ ನೇತಾಡುವ ಬಾಬಸಾಹೇಬರನ್ನು ಎಲ್ಲರ ಮೆದುಳನೊಳಗೆ ಇಳಿಸಬೇಕಿದೆ.ಸಂವಿಧಾನವೆಂಬ ಮಹಾ ಬೀಜವನ್ನು ಪ್ರತಿಯೊಬ್ಬ ಭಾರತೀಯನ ಎದೆಯೊಳಗೆ ಬಿತ್ತಬೇಕಿದೆ.ಸಂವಿಧಾನಕ್ಕೆ ಬಂದಿರುವ ಆಪತ್ತನ್ನು ಮನದಟ್ಟು ಮಾಡಿ ಸಂವಿಧಾನದಲ್ಲಿ ಈ ದೇಶದ ಸಂರಕ್ಷಣೆ ಅಡಗಿರುವುದನ್ನು ಪ್ರತಿಯೊಬ್ಬರು ಅರಿಯಬೇಕು.

ಹುಚ್ಚಂಗಿ ಪ್ರಸಾದ್
ಸಂತೇಬೆನ್ನೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version