ಬಹಿರಂಗ

ರಾಕೆಟ್ ಕಣ್ಣುಗಳ ಹ್ಯಾಂಡ್ ಸಮ್ ‘ಅಂಬೇಡ್ಕರ್’..!

Published

on

  • ರಘೋತ್ತಮ ಹೊಬ

ಬಾಬಾಸಾಹೇಬ್ ಅಂಬೇಡ್ಕರರಿಗೆ ತಮ್ಮಷ್ಟಕ್ಕೆ ತಾವು ತಮ್ಮ ಉಡುಪಿನಲ್ಲಾಗಲೀ ಮಾತಿನಲ್ಲಾಗಲೀ ಅಸ್ಪೃಶ್ಯನಂತೆ ಗುರುತಿಸಿಕೊಳ್ಳುವ ಅಗತ್ಯ ಬೀಳಲಿಲ್ಲ. ಅವರು ಅಸ್ಪೃಶ್ಯರಾಗಿದ್ದರು ಅದನ್ನೊರತುಪಡಿಸಿ ಅವರಿಗೆ ಬೇರೆ ಆಯ್ಕೆ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಅವರು ಸುಶಿಕ್ಷಿತ ಗಣ್ಯರೋರ್ವರಾಗಿದ್ದರೂ ಅವರ ಗಣ್ಯತೆಗೆ ಅವರ ಉಡುಪು ಮತ್ತು ನಡೆ ಮತ್ತಷ್ಟು ಬಲ ತುಂಬುತ್ತಿತ್ತು. ಅಂದಹಾಗೆ 1918ರಲ್ಲಿ ಲಂಡನ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಅಂಬೇಡ್ಕರರನ್ನು ಅವರ ಪ್ರಾಯೋಗಿಕ ಸಾಮರ್ಥ್ಯ ಕಂಡು ಶಿಫಾರಸು ಮಾಡಿದ ಪರಿ ಹೇಗಿತ್ತೆಂದರೆ “ಮೇಲ್ನೋಟಕ್ಕೆ ಅವರು ದಪ್ಪ ಇಂಡಿಯನ್ ನಂತೆ ಕಂಡರೂ ಅವರ ನಡೆ ಸ್ಕಾಚ್ ಅಮೆರಿಕನ್ ಥರ ಇದೆ” ಎಂದು!

ಇನ್ನು 1932ರಲ್ಲಿ (ಎರಡನೇ ದುಂಡು ಮೇಜಿನ ಸಭೆಯ ಸಂದರ್ಭದಲ್ಲಿ) ಮಹಾತ್ಮ ಗಾಂಧಿಯವರು ಅಂಬೇಡ್ಕರರನ್ನು ಭೇಟಿಯಾದರು. ಆಗ ಗಾಂಧಿ ಹೇಳಿದ್ದೆಂದರೆ “ನಾನು ಇಂಗ್ಲೆಂಡ್ ಗೆ ಹೋಗುವವರೆಗೆ ಅವರು (ಅಂಬೇಡ್ಕರ್) ಹರಿಜನರೆಂದು ನನಗೆ ತಿಳಿದಿರಲಿಲ್ಲ. ನಾನು ಅಂದುಕೊಂಡಿದ್ದೇನೆಂದರೆ ಅವರು ಯಾರೋ ಹರಿಜನರ ಬಗ್ಗೆ ಗಾಢ ಆಸಕ್ತಿ ಇರುವ ಬ್ರಾಹ್ಮಣರಿರಬೇಕು.

ಅದಕ್ಕಾಗಿ ಅಷ್ಟೊಂದು ಅಂಕೆಯಿಲ್ಲದೆ ಮಾತನಾಡುತ್ತಿದ್ದಾರೆ” ಎಂದು. ಇನ್ನು ತಮ್ಮ ಜೀವನದ ಅಂತ್ಯದ ದಿನಗಳಲ್ಲಿ ಅಂಬೇಡ್ಕರರು ಭಾರತೀಯ ಉಡುಗೆ ತೊಡುಗೆ ತೊಡಲು ಪ್ರಾರಂಭಿಸಿದಾಗ ಅದನ್ನು ಒಬ್ಬ ಅಮೆರಿಕನ್ ಲೇಖಕ ವಿವರಿಸಿದ್ಹೇಗೆಂದರೆ “ಹ್ಯಾಂಡ್ ಸಮ್”, ” ರಾಕೆಟ್ ಕಣ್ಣುಗಳು “, ಮತ್ತು “ಪರಿಶುದ್ಧ ಭಾರತೀಯ ಶ್ವೇತ ವಸ್ತ್ರ ಧರಿಸಿದ್ದ ಓರ್ವ ಗಂಭೀರ ಕನ್ನಡಕಧಾರಿ ರೋಮನ್ ಸೆನೆಟರ್” ಎಂದು!

(ಆಧಾರ: “From Untouchable to Dalit ” by Eleanor Zelliot, Pp.60)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version