ನೆಲದನಿ

ಜಾನಪದದ ಬೇರು, ಶಿಕ್ಷಣ-ರಂಗಭೂಮಿಯ ತೇರು ‘ಡಾ.ಎಂ.ಜಿ. ಈಶ್ವರಪ್ಪ’

Published

on

ಡಾ.ಎಂ.ಜಿ. ಈಶ್ವರಪ್ಪ
  • ಡಾ.ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಪದವಿ ಪೂರ್ವಕಾಲೇಜು,ದಾವಣಗೆರೆ

ರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ವೈಚಾರಿಕತೆ ಮತ್ತು ಮಾನವೀಯತೆಯ ನೆಲೆವೀಡು. ಈ ನಾಡು ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸರಂತಹ ಅನೇಕ ಕವಿಗಳು ನೆಲೆಸಿದ್ದ ಪುಣ್ಯಭೂಮಿ. ಕನ್ನಡ ಸಾಹಿತ್ಯ ಪರಂಪರೆಯಲ್ಲಿಜನಪದಕ್ಕೆ ಶ್ರೀಸಾಮಾನ್ಯರ, ವಚನಕ್ಕೆ ಶರಣರ, ಕೀರ್ತನ ಸಾಹಿತ್ಯಕ್ಕೆದಾಸರಕೊಡುಗೆಅಪಾರವಾಗಿದ್ದು ದೇಸಿ ನೆಲೆಗಟ್ಟಿನೊಂದಿಗೆ ಮೌಲ್ಯಪ್ರಜ್ಞೆ ಬಿತ್ತುವಲ್ಲಿ ಸಿದ್ಧಹಸ್ತವಾಗಿವೆ. ಕವಿವಾಣಿ ಹೂವಾದರೆಜನವಾಣಿ ಬೇರಾಗಿ ಕಂಗೊಳಿಸುತ್ತದೆ.

ಇಂತಹಜನಪದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿಜಾನಪದ ವಿದ್ವಾಂಸರಾಗಿ ಗುರುತಿಸಿಕೊಂಡಿರುವ ಹಲವರಲ್ಲಿ ಮಧ್ಯಕರ್ನಾಟಕದ ಹೃದಯ ಭಾಗವಾದದಾವಣಗೆರೆ ನಗರದಲ್ಲಿ ನೆಲೆಸಿರುವ ಜಾನಪದತಜ್ಞರಾದಡಾ.ಎಂ.ಜಿ.ಈಶ್ವರಪ್ಪ ಪ್ರಮುಖರು.

ಬಾಲ್ಯ ಮತ್ತು ಶಿಕ್ಷಣ

ಜ್ಞಾನದಿಂ ಮೇಲಿಲ್ಲ, ಶ್ವಾನನಿಂ ಕೀಳಿಲ್ಲ
ಭಾನುವಿನಿಂದಧಿಕ ಬೆಳಕಿಲ್ಲ ಜಗದೊಳಗೆ
ಜ್ಞಾನವೇ ಮಿಗಿಲು ಸರ್ವಜ್ಞ

ಎಂಬ ನುಡಿಗೆ ಪೂರಕವಾಗಿಜ್ಞಾನದ ಹಾದಿಯನ್ನು ಹಿಡಿದು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ಚಿಂತಕರಾಗಿ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನಅಧ್ಯಾಪಕರಾಗಿ, ಉತ್ತಮ ಮಾತುಗಾರರಾಗಿ, ಸರ್ವರ ಮನಸ್ಸನ್ನುಗೆದ್ದಿರುವಡಾ.ಎಂ.ಜಿ. ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಎಂಬ ಗ್ರಾಮದಲ್ಲಿ ಶ್ರೀಮತಿ ಗಿರಿಜಮ್ಮ ಮತ್ತು ಶ್ರೀ ರುದ್ರಪ್ಪ ದಂಪತಿಗಳ ಪುತ್ರರಾಗಿ 02-12-1950ರಲ್ಲಿ ಜನಿಸಿದರು.ತಂದೆ ಕೃಷಿ ಕಾಯಕವನ್ನು ಅವಲಂಬಿಸಿದ್ದರಿಂದ ಕೃಷಿ ಚಟುವಟಿಕೆಗಳನ್ನು ರೂಢಿಸಿಕೊಂಡು ಗ್ರಾಮೀಣ ಸೊಗಡನ್ನುಆಸ್ವಾದಿಸುತ್ತಿದ್ದರು.

ಪದವಿ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಪೂರೈಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದಕನ್ನಡ ವಿಷಯದಲ್ಲಿಸ್ನಾತಕೋತ್ತರ ಪದವಿಯನ್ನು ಪಡೆದರು. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಇವರುಖ್ಯಾತಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯ ಅವರ ಮಾರ್ಗದರ್ಶನದಲ್ಲಿ ‘ವ್ಯವಸಾಯಜಾನಪದ’ ಎಂಬ ವಿಷಯದ ಮೇಲೆ ಪಿಹೆಚ್.ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.

ಅಧ್ಯಾಪಕರಾಗಿ ಎಂ.ಜಿ.ಈಶ್ವರಪ್ಪ

ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ
ಆಚಾರ್ಯಸ್ಯ ಪ್ರಭಾವೇನ ಶಿಷ್ಯಭವತಿ ಸುಶಿಕ್ಷಿತಃ

ಎಂಬ ನುಡಿಯಂತೆ ವಿದ್ಯಾರ್ಥಿಗಳ ಮೆಚ್ಚಿನಅಧ್ಯಾಪಕರಾಗಿದಾವಣಗೆರೆಯ ಪ್ರತಿಷ್ಟಿತ ವಿದಾಕೇಂದ್ರವಾದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಧ್ಯಾಪಕ ಸಂಘ, ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರುಎನ್,ಎಸ್.ಎಸ್‌ಅಧಿಕಾರಿಯಾಗಿ 11 ವರ್ಷಗಳ ಕಾಲ 6 ಶಿಬಿರಗಳನ್ನು ನಡೆಸಿ ಗ್ರಾಮೀಣಜನಜೀವನದ ಸಮಸ್ಯೆಗಳ ಪರಿಚಯವನ್ನು ಮಾಡಿಕೊಂಡರು. ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ರಂಗಭೂಮಿ ಮತ್ತುಈಶ್ವರಪ್ಪ

ಒಳ್ಳೆಯ ನಟ, ನಿರ್ದೇಶಕರಾಗಿಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವಈಶ್ವರಪ್ಪನವರು ವಿದ್ಯಾರ್ಥಿದೆಸೆಯಿಂದಲೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನಾಟಕಅಕಾಡೆಮಿಯ ಅಫಿಲಿಯೇಶನ್ ಪಡೆದಿರುವದಾವಣಗೆರೆಯ ಪ್ರತಿಷ್ಟಿತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ “ಪ್ರತಿಮಾ ಸಭಾ” ದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 1979ರಲ್ಲಿ ವಿಶ್ವವಿದ್ಯಾನಿಲಯದಧನಸಹಾಯಆಯೋಗದಿಂದ ನಡೆದರಾಷ್ಟ್ರ ಮಟ್ಟದರಂಗಭೂಮಿ, ರಂಗನಟನೆ, ರಂಗ ನಿರ್ದೇಶನಕುರಿತಂತೆ ಕೇರಳದ ತ್ರಿಚೂರಿನ ಸ್ಕೂಲ್‌ಆಫ್‌ಡ್ರಾಮಾದಲ್ಲಿ ಭಾಗಿಯಾಗಿ, ಪ್ರತಿಮಾ ಸಭಾ ನಡೆಸಿದ ರಂಗ ಶಿಬಿರದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡಿದ್ದಾರೆ.

ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಕಬೀರ, ಸೆಜುವಾನಿನ ಸಾಧ್ವಿ, ಕೊಡೆಗಳು ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ.ಜಾತ್ರೆ, ಸಾಯೋಆಟ, ಅಪ್ಪ, ಕಡೇಮನೆಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.ನಾಗನ ಕತೆ ನಾಟಕಕ್ಕೆಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಲಭಿಸಿದೆ.

1979 ರಲ್ಲಿ ಹೆಗ್ಗೋಡಿನಲ್ಲಿ ನಡೆದ ಚಲನಚಿತ್ರ ಸಹೃದಯ ಶಿಬಿರ, 1983 ರಲ್ಲಿರಂಗ ನಿರ್ದೇಶಕರ ಶಿಬಿರ, 1984ರಲ್ಲಿ ನಾಟಕಅಕಾಡೆಮಿಕೊಂಡಜ್ಜಿಯಲ್ಲಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 1983ರಲ್ಲಿಕರ್ನಾಟಕ ನಾಟಕಅಕಾಡೆಮಿ ನೀಡಿದ ಧನಸಹಾಯದಿಂದ ದಿಗ್ಗಜ ಶ್ರೀ. ಬಿ.ವಿ ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೋಪಾಲ್ ಮತ್ತುದೆಹಲಿಯಲ್ಲಿರಂಗಭೂಮಿಅಧ್ಯಯನ ನಡೆಸಿದ್ದಾರೆ.

1982 ರಲ್ಲಿ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಿ.ಶಂ.ಪರಮಶಿವಯ್ಯ ಹಾಗೂ ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದಚಿತ್ರದುರ್ಗ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಜಾನಪದಕಲಾವಿದರು ಮತ್ತುತಂತಿ ವಾದ್ಯಗಳ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.ಕರ್ನಾಟಕದ ಇತರೆಡೆಗಳಲ್ಲಿ ನಡೆದಜಾನಪದ ಸಾಹಿತ್ಯ ಸಮ್ಮೇಳನ ಮತ್ತು ಕಲಾಮೇಳಗಳಿಗೆ ಹಲವು ಬಾರಿಕಲಾವಿದರ ತಂಡಗಳ ನೇತೃತ್ವವನ್ನು ವಹಿಸಿದ್ದಾರೆ.

1986ರಲ್ಲಿಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ ಚಿತ್ರದುರ್ಗಜಿಲ್ಲೆಯಕಿನ್ನರಿಜೋಗಿತಂಡದ ನೇತೃತ್ವವನ್ನು ವಹಿಸಿರುತ್ತಾರೆ.1987 ರಲ್ಲಿಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಬಾಪೂಜಿ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದಜಾನಪದ ಸಾಹಿತ್ಯ ಸಮ್ಮೇಳನ ಮತ್ತು ಕಲಾಮೇಳದ ಸಂಘಟನೆಯನ್ನು ಮಾಡಿಜಾನಪದರಂಗ ಪ್ರಕಾರಗಳನ್ನು ಆಧುನಿಕರಂಗಭೂಮಿಗೆ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಅಷ್ಟೇ ಅಲ್ಲದೆಜಾನಪದರಂಗಭೂಮಿಕುರಿತು ಸಾಕಷ್ಟು ತಜ್ಞ ಉಪನ್ಯಾಸಗಳನ್ನು ಆಕಾಶವಾಣಿಯಲ್ಲಿ ನೀಡಿದ್ದಾರೆ.1986 ಮತ್ತು1990 ರಲ್ಲಿಕರ್ನಾಟಕಜಾನಪದ ಮತ್ತುಯಕ್ಷಗಾನಅಕಾಡೆಮಿ ನಡೆಸಿದ ಜಾನಪದತಜ್ಞರ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಸಾಹಿತ್ಯ ಸೇವೆ

ಪುಸ್ತಕಗಳು ಜ್ಞಾನದ ಭಂಡಾರವಿದ್ದಂತೆ ಅವು ಮನುಷ್ಯನನ್ನುಉತ್ತಮ ಭವಿಷ್ಯಕ್ಕೆಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮಜ್ಞಾನವನ್ನುತಣಿಸುವ ಆಲಯಗಳಿವು ಎಂಬುದನ್ನರಿತ ಶ್ರೀಯುತರು ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರಕೂದಲ ಜೈರಾಣಿ, ಜಾನಪದ ಇಬ್ಬನಿಗಳು, ಸಾಹಿತ್ಯ ಸಂಚಲನ, ಕೃಷಿ ಜಾನಪದ, ಹುನಗುಂದ ಬಾಬಣ್ಣ…..ಹೀಗೆ ಸುಮಾರು 18 ಪುಸ್ತಕಗಳನ್ನು ಸಾಹಿತ್ಯಕ್ಷೇತ್ರಕ್ಕೆಕೊಡುಗೆಯಾಗಿ ನೀಡಿದ್ದಾರೆ.ಅಲ್ಲದೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

ಜೊತೆಗೆಜನಪದ, ವಚನ, ಬಂಡಾಯ ಮತ್ತುದಲಿತ ಸಾಹಿತ್ಯ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪ್ರೌಢಪ್ರಬಂಧವನ್ನು ರಚಿಸಿ ಪಿಹೆಚ್.ಡಿ ಪದವಿ ಪಡೆಯಲು ಕುವೆಂಪು ವಿಶ್ವವಿದ್ಯಾನಿಲಯದಿಂದ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಾಡಿನಎಲ್ಲ ಭಾಗಗಳಲ್ಲಿಯೂ ಸಂಚರಿಸಿ ಸಾಹಿತ್ಯಿಕ ಮತ್ತುಜಾನಪದ ವಿಷಯಗಳನ್ನು ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ 2 ಜಿಲ್ಲಾ ಸಮ್ಮೇಳನಗಳನ್ನು 2 ತಾಲೂಕು ಸಮ್ಮೇಳನಗಳನ್ನು ಹಾಗೂ ಗುಣಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಂದ ಪ್ರಶಸ್ತಿಗಳು

ಶ್ರೀಯುತರ ಸಾಹಿತ್ಯ, ಜಾನಪದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

  • 1993ರಲ್ಲಿ ಗುಂಡ್ಮಿಜಾನಪದ ಪ್ರಶಸ್ತಿ
  • 1995 ಕು.ಶಿ. ಹರಿದಾಸ ಭಟ್ಟ ಪ್ರಶಸ್ತಿ
  • 2000 ಕರ್ನಾಟಕ ನಾಟಕಅಕಾಡೆಮಿಗೌರವ ಫೆಲೋಷಿಪ್
  • 2003 ಕರ್ನಾಟಕಜಾನಪದಅಕಾಡೆಮಿಯತಜ್ಞ ಪ್ರಶಸ್ತಿ
  • 2010 ಹ.ಕ. ರಾಜೇಗೌಡಜಾನಪದ ಪ್ರಶಸ್ತಿ

    2011ರಂಗ ಸಂಸ್ಥಾನ ಜಾನಪದ ಪ್ರಶಸ್ತಿ

  • 2014ಮಹಲಿಂಗರಂಗ ಪ್ರಶಸ್ತಿ
  • 2020ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ

ತನ್ನ ನೋಡಲಿ ಎಂದುಕನ್ನಡಿಯುಕರೆವುದೆ
ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು
ಕನ್ನಡಿಯಂತೆ ಸರ್ವಜ್ಞ

ಎಂಬ ನುಡಿಗೆ ಪೂರಕವಾಗಿ ಬದುಕುತ್ತಿರುವ ಡಾ.ಎಂ.ಜಿಈಶ್ವರಪ್ಪ ಒಳ್ಳೆಯ ಅಧ್ಯಾಪಕರಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ಸರ್ವರ ಮನಸ್ಸನ್ನುಗೆದ್ದಿರುವಇವರು ಸದಾಕಾಲ ಹಸನ್ಮುಖಿ.ಎಲ್ಲರನ್ನು ಪ್ರೀತಿತುಂಬಿದ ಮನಸ್ಸಿನಿಂದ ಮಾತನಾಡಿಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು.

ನಮ್ಮಂತಹ ಅನೇಕ ಕಿರಿಯ ಅಧ್ಯಾಪಕರಿಗೆ ಮಾರ್ಗದರ್ಶಕರಾಗಿರುವ ಈಶ್ವರಪ್ಪನವರುರಾಜ್ಯಮಟ್ಟದ 5 ನೇ ಭಕ್ತಿ ಸಾಹಿತ್ಯ ಸಮ್ಮೇಳನ ಪಂ.ಪುಟ್ಟರಾಜ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ. ಅಲ್ಲದೆ ನವೆಂಬರ್ 8 ರಂದು ಸಾಣೇಹಳ್ಳಿಯಲ್ಲಿ ನಡೆಯಲಿರುವರಾಷ್ಟ್ರೀಯ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಕೊಡಮಾಡುವ ಶ್ರೀ ಶಿವಕುಮಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಪರಮಪೂಜ್ಯ ಡಾ.ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪಡೆಯುತ್ತಿರುವ ಡಾ.ಎಂ.ಜಿ.ಈಶ್ವರಪ್ಪನವರ ಸಾಧನೆಯ ಬದುಕು ನಮಗೆಲ್ಲ ಸ್ಫೂರ್ತಿಯಾಗಲಿ ಎಂಬ ಆಶಯದೊಂದಿಗೆ.

[ಅಕ್ಟೋಬರ್-30 ರಂದು ದಾವಣಗೆರೆಯಲ್ಲಿ ನಡೆಯಲಿರುವ 05ನೆಯ ರಾಜ್ಯಮಟ್ಟದ ಭಕ್ತಿ ಸಾಹಿತ್ಯ ಸಮ್ಮೇಳನ (ಪಂ.ಪುಟ್ಟರಾಜ ಸಾಹಿತ್ಯೋತ್ಸವ-2022)ದ ಸಮ್ಮೇಳನಾಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಆಯ್ಕೆಯಾಗಿದ್ದು ತನ್ನಿಮಿತ್ತ ಈ ಲೇಖನ]

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version