ದಿನದ ಸುದ್ದಿ

ದಾವಣಗೆರೆ ಲಾಕ್ ಡೌನ್ | ಡ್ರೋಣ್ ಕ್ಯಾಮೆರಾದ ಹದ್ದಿನ ಕಣ್ಣು..! : ಫೋಟೋಗಳಿವೆ ಮಿಸ್ ಮಾಡ್ದೆ ನೋಡಿ

Published

on

ಆಝಾದ್ ನಗರ

ಸುದ್ದಿದಿನ,ದಾವಣಗೆರೆ : ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಹೊರ ಬರುತ್ತಿರುವುದನ್ನು ಮಟ್ಟ ಹಾಕಲು ಎಸ್ಪಿ ಹನುಮಂತರಾಯ ನೇತೃತ್ವದ ತಂಡ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿಣ್ಣಿನ ಕಣ್ಣಿಟ್ಟಿದೆ.

ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾವನ್ನು ಶನಿವಾರ ಹಾರಿಸಲಾಯಿತು.
ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾವನ್ನು ಪೊಲೀಸ್ ಪೇದೆ ಪ್ರಶಾಂತ್ ಠಾಣಾ ವ್ಯಾಪ್ತಿಯಲ್ಲಿ ಹಾರಿಸಿದರು.

ಆಝಾದ್ ನಗರ

ಅಲ್ಲದೇ ಪೊಲೀಸ್ ವಾಹನಗಳಲ್ಲಿನ ಮೈಕ್ ಮೂಲಕ ಹೊರಗಡೆ ಬಂದರೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಲಾಯಿತು.ಈ ಕಾಲೊನಿಗಳಲ್ಲಿ ಜನರು ಹೊರಗಡೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು.ಇಲ್ಲಿನ ಗಲ್ಲಿಗಲ್ಲಿಗಳಲ್ಲೂ ಡ್ರೋಣ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಮೈದಾನ, ಗದ್ಡೆ ಸೇರಿ ಹಲವೆಡೆ ಕ್ರಿಕೆಟ್ ಆಡುವವರ, ಗುಂಪು ಸೇರುವವರ ಪತ್ತೆಗೆ ಬಳಕೆ ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಯಿತು.

ಪೊಲೀಸರ ಡ್ರೋನ್ ಕ್ಯಾಮಾರಾ ಕಂಡು ಬೈಕ್ ಸವಾರರು ಅರ್ಧ ದಾರಿಯಿಂದಲೇ ವಾಪಸಾಗುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುಂಪು ಸೇರಿ ಮಾತನಾಡುವ, ಕ್ರಿಕೆಟ್ ಆಡುವ ಯುವಕರೂ ಡ್ರೋಣ್ ನನ್ನು ಕುತುಹೂಲದಿಂದ ನೋಡುತ್ತಿದ್ದರು.ಒಟ್ಟಾರೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡುವ ಜನರನ್ನು ನಿಯಂತ್ರಿಸಲು ಡ್ರೋನ್ ಕ್ಯಾಮೆರಾದ ಬಳಕೆ ಮಾಡಿ ಹೊಸ ಪ್ರಯೋಗವೊಂದನ್ನು ಜಿಲ್ಲಾ ಪೊಲೀಸರು ಕೈಗೊಂಡಿದ್ದು, ಈ ಪ್ರಯೋಗ ಯಶಸ್ವಿಯಾಗುತ್ತಿದೆಯೇ ಎಂದು ಕಾದು ನೋಡಬೇಕಾಗಿದೆ. ಈ ಸಂದರ್ಭದಲ್ಲಿ ಪಿಎಸ್ಐ ಶೈಲಜಾ ಸೇರಿದಂತೆ ಠಾಣಾ ಸಿಬ್ಬಂದಿಗಳು ಇದ್ದರು.

ಡ್ರೋಣ್ ಕ್ಯಾಮೆರಾ ವಿಶೇಷ

ಈ ಡ್ರೋಣ್ ಕ್ಯಾಮೆರಾ ಅಂದಾಜು ಎರಡು ಲಕ್ಷ ರೂಪಾಯಿದ್ದಾಗಿದ್ದು, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಕವರ್ ಮಾಡುತ್ತದೆ. ಸುಮಾರು ಏಳನೂರು ಮೀಟರ್ ಎತ್ತರಕ್ಕೆ ಹಾರುತ್ತದೆ. ಇದರೊಳಗೆ ನಾಲ್ಕು ಬ್ಯಾಟರಿಗಳಿದ್ದು, ಒಂದು ಬ್ಯಾಟರಿ ಎರಡು ಗಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version