ದಿನದ ಸುದ್ದಿ

ನಾಟಿ ವ್ಯದ್ಯನ ನ‌ಕರಾ ಟ್ರಿಟ್ಮೆಂಟ್ ;  ಇವನು ಡಮ್ಮಿ ಡಾಕ್ಟರ್… !

Published

on

ಸುದ್ದಿದಿನ,ವಿಶೇಷ : ವ್ಯದ್ಯೋ ನಾರಾಯಣ ಹರಿ‌ ಅಂತ ಡಾಕ್ಟರನ ಯಾಕ್ಕೆ ಕರೀತಿವಿ ಅಂದ್ರೆ, ದೇವರು ಬಿಟ್ರೆ ಆ ಸ್ಥಾನವನ್ನು ತುಂಬಬಲ್ಲ ಮತ್ತೊಂದು ಸ್ಥಾನವೇ ಈ ಡಾಕ್ಟರ್.ಅಂತಹ ನಾಮಕ್ಕೆ ಇಲ್ಲೊಬ್ಬ ಡಮ್ಮಿ ಡಾಕ್ಟರ್ ಕಳಂಕತಂದಿಟು ಮುದ್ದಾದ ಮಗುವಿನ ಜೀವನದಲ್ಲಿ ಮುಳ್ಳಾಗಿದ್ದಾನೆ. ಡಾಕ್ಟರ್ ಮಾಡಿದ ಕೆಲಸಕ್ಕೆ ಜೀವನ‌ ಪರೀಯಂತ ಹುಡುಗನ ‌ಕೈ ಇಲದಂತೆ ಮಾಡಿ ಅಂಗವಿಕಲನನಾಗಿ ಮಾಡಿದ್ದಾನೆ.

ಈ ಹುಡುಗನ ಹೆಸರು ಆದರ್ಶ. ನಾಟಿವ್ಯದ್ಯನು ಮಾಡ್ಡಿದ ಅವಾಂತರಗಳಿಂದ.ಜೀವನ ಪರಿಯಂತ ಕೈ ಕಳೆದುಕೊಂಡು ತನ್ನ ಆಸೆ ಆಕಾಂಕ್ಷೆ ಆದರ್ಶಗಳು‌ ಇನ್ನು ಮುಂದೆ ಯುವಕನ ಬಾಳಲ್ಲಿ ಕೇವಲ ಕೈ ಚೀಲದ ಕನಸುಗಳಂತಾಗಿದೆ.ತನ್ನ ಸ್ನೇಹಿತರ ಜೊತೆ ಆಟವಾಡಲು ಸಹ ಇವನಿಗೆ ಆಗುತ್ತಿಲ್ಲ.ಇವನ ತರ್ಲೆ ತುಟಾಂಟಗಳು ಹೆತ್ತವರಿಗೆ ದಿನೇ ‌ದಿನೇ‌ ಕ್ಷಿಣಿಸುತ್ತಿದೆ. ಕೇವಲ ನೆನಪುಗಳಾಗಿ ಕಾಡುತ್ತಿದೆ.ಇನ್ನು ಇವನ ಸ್ನೆಹೀತರಿಗಂತು ಇವನ್ನು ಕೈ ಕಳೆದುಕೊಂಡಿದು ಕಾಣದ ಕನಸಾಗಿದೆ.

ಶಾಲಾ ರಜಾದಿನಗಳಲ್ಲಿ ‌ಮಕ್ಕಳ ಆಟ, ತುಟಾಂಟ. ಗಲಾಟೆ,ಹೆತ್ತವರಿಗಂತು ಸಾಕ್ಕಪ‌ ಸಾಕ್ಕು ಈ ರಜಾ ದಿನಗಳು. ಯಾವಾಗ ಮುಗಿದು ಶಾಲೆ ಪ್ರಾರಂಭವಾಗುತ್ತೆ ಅನಿಸ್ಸಿರುತ್ತೆ. ಹೀಗೆ ಮನೆಯವರ ಕೈ ಗೆ ಸಿಗದೆ ಆಟವಾಡುತ್ತಿದ 8 ವರ್ಷದ ಬಾಲಕ‌ ಆದರ್ಶ ಕಾಲು ಜಾರಿ ಬಿಳುತ್ತಾನೆ. ಕೈ ಗೆ ಬಲವಾದ ಪೆಟ್ಟು ಬಿದಿರುವದರಿಂದ ಆದರ್ಶನನ್ನು ಲಿಂಗಸುಗೂರಿನ ಎಲಬು ಮತ್ತು ಕೀಲು‌ ತಜ್ಞ ಡಾ,ಹರ್ಷವರ್ಧನ ಹತ್ತಿರ ಚಕಿತ್ಸೆ ಕೊಡಿಸುತ್ತಾರೆ.ಯಾವುದೇ ಕಾರಣಕ್ಕು ಕೈಗೆ ಹಾಕ್ಕಿದ ಪಟ್ಟಿಯನ್ನು ಬಿಚ್ಚಬಾರದು ಅಂತಾ ಹೇಳಿರುತ್ತಾರೆ.

ನಕಲಿ ವೈದ್ಯನ ಕರಾಮತ್ತು

ಇನ್ನೇನು ರಜಾ ದಿನಗಳು ಮುಗ್ಗಿದು ಶಾಲೆ ಪ್ರಾರಂಭವಾಗುವ ದಿನ ಬಾಲಕ ಬೇಗ ಚೇತರಿಸಿಕೊಳ್ಳಲ್ಲಿ‌ ಅಂತಾ ಹೆತ್ತವರು ನೆರೆ ಹೊರೆಯರ ಮಾತು‌ಕೇಳಿ ದೇವದುರ್ಗ ತಾಲೂಕಿನ ಚೀಚೊಂಡಿ ಗ್ರಾಮದ ಪರಮಣ್ಣ ಬನಗುಂಡಿ ಎಂಬ ನಾಟಿ ವ್ಯದ್ಯನ‌ ಹತ್ತಿರ ಕರೆದುಕೊಂಡು ಹೊಗುತ್ತಾರೆ.
ಅಲ್ಲಿ ಕಾದಿತ್ತು ನೋಡಿ ಗಂಡಾತಂರ.

ಈ ಹುಡುಗನ‌ ಬಾಳಿನಲ್ಲಿ ಎಲ್ಲಿ ಅಡಗಿ ಕುತ್ತಿದನೋ ಈ ನಾಟಿ‌ ವ್ಯದ್ಯ ಪರಮಣ್ಣ .ಬ್ರಹ್ಮ‌ಬರೆದ ವಿಧಿಯನ್ನೆ ಬದಲಾಯಿಸಬಿಟ್ಟ .ಅದು ಯಾವ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದನೋ ಗೊತ್ತಿಲ್ಲ ಯಾವ ಫಾರಿನ ಟ್ರಿಟ್ಮೆಂಟ್ ಕೊಟ್ಟನೋ ಎನ್ನೋ…ಡಾಕ್ಟರ್ ಹಾಕ್ಕಿದ ಪ್ಲಾಸ್ಟರ್ ಬಿಚ್ಚಿ ಅವನ ನಾಟಿ‌ ಔಷಧಿ ಯನ್ನು ಹಾಕ್ಕಿ ಬೀಗಿಯಾಗಿ ಎಳೆದು ಕಟ್ಟಿದ್ದಾನೆ . 8 ವರ್ಷದ ಎಳೆಯ‌ ಕೈ ಗಳು‌ ಮರುದಿನವೇ ಅಡ್ಡ ಪರಿಣಾಮ ಬೀರಿ‌ ಏಕಾಏಕಿ ಕೈ ಗಳು ಬಾವು,ನೊವು ಕಾಣಿಸಿಕೊಂಡಿದೆ.ಹೆತ್ತವರಿಗೆ ಭಯ ಉಟಾಂಗಿ ನಾಟಿ ವ್ಯದ್ಯನನ್ನು ಸಂಪರ್ಕಿಸಿದ್ದಾರೆ.ನಾಟಿ ವೈದ್ಯ ನಾಟಿ ನಾಟಿಯಾಗಿ ಉತ್ತರಿಸಿದ್ದಾನೆ. ಯಾವುದೇ ಕಾರಣಕ್ಕು 21 ದಿನಗಳವರೆಗೆ ಬಿಚ್ಚಬೇಡಿ ಎಂದಿದ್ದಾನೆ‌.ಆದ್ದರೆ ಮಗುವಿಗೆ ನೋವು ತೀವ್ರವಾಗಿ ಕಾಣಿಸಿಕೊಂಡಿದೆ. ಇದನ್ನು ಕಂಡ ಹೆತ್ತವರು ಡಾ,ಹರ್ಷವರ್ಧನ ಹತ್ತಿರ ಕರೆದುಕೊಂಡು ಹೊಗಿದ್ದಾರೆ .ಅಲ್ಲಿ ಕಾದಿತ್ತು‌ ನೋಡಿ ನಾಟಿ ವ್ಯದ್ಯ ನ ತರಲೆ ಚಿಕಿತ್ಸೆ. ನಾಟಿ ವ್ಯದ್ಯ ನ‌ ಪಟ್ಟಿಯನ್ನು ಬಿಚ್ಚಿ ನೋಡಿದ ಡಾ,ಹರ್ಷವರ್ಧನಗೆ ಆ ದೃಶ್ಯವನ್ನು ಕಂಡು ಒಂದು ಕ್ಷಣ ಸಿಡಿಲು ಬಡ್ಡಿದಂತಾಗಿದೆ .ಯಾಕಂದ್ರೆ ಕೈ ಗಳು ರಕ್ತ ಚಲನೆ ಇಲ್ಲದೆ ಕಪ್ಪು ಬಣ್ಣಕ್ಕೆ ತಿರುಗಿ ಕೈ ನರಗಳು ಸತ್ತು ಹೋಗಿವೆ.ಇದರಿಂದ ಭಯ ಭಿತ್ತರಾಗಿ ಬಾಲಕನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಹಾರಾಷ್ಟ್ರ ದ ಮೀರಜ್ ಜೆ.ಎಸ್ ಕೆ ಖಾಸಗಿ ಆಸ್ಪತ್ರೆ ಗೆ ಕರೆದುಕೊಂಡು ಹೊಗಿದ್ದಾರೆ.

ಖಾಸಗಿ ಆಸ್ಪತ್ರೆ ಯಲ್ಲಿ ವೈದ್ಯರು ಹೇಳಿದಂತೆ ನಾಟಿ ಔಷಧಿಯ ಅಡ್ಡಪರಿಣಾಮದಿಂದ ಮಗುವಿನ ನರಗಳು ಸತ್ತುಹೊಗಿದೆ.ಹೀಗೆ ಬಿಟ್ಟರೆ ದೇಹದಲ್ಲಿ ಹರಡಿಕೊಳ್ಳುತದೆ.ಇದರಿಂದ ಮಗುವಿನ‌ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.ಕೈ ಬೇಕು ಅಂದ್ರೆ ಪ್ರಾಣ ಇರಲ್ಲ ಪ್ರಾಣ ಬೇಕು ಅಂದ್ರೆ ಕೈ ಕತ್ತರಿಸಲೆಬೇಕು ಎಂದಾಗ ಅನಿವಾರ್ಯವಾಗಿ ಮಗುವಿನ ಮೋಣ ಕೈ ಕೆಳಗೆ ಕತ್ತರಿಸಲಾಗುತ್ತದೆ.ಮೋದಲೆ ಬಡ ಕುಟುಂಬ ಸುಮಾರ ಎರಡು ಲಕ್ಷ ಕಳೆದುಕೊಂಡು ಸಾಲಗಾರರಾಗಿ ತಿರುಗುತ್ತಿದ್ದಾರೆ.ಇತ್ತಕಡೆ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದರು ಪ್ರಯೋಜನವಾಗಿಲ್ಲ. ವೈದ್ಯನಿಂದ ಯಾವುದೇ ಸಹಾಯವು ಇಲ್ಲ. ಘಟನೆ ನಡೆದ ದಿನದಿಂದ ನಾಟಿ ವ್ಯದ್ಯ ಪರಾರಿಯಾಗ್ಗಿದಾನೆ .ಇನ್ನು ಮಗನ ಚಿಕಿತ್ಸೆಗಾಗಿ ಹೆತ್ತವರು ಕಂಡ ಕಂಡವರ ಹತ್ತಿರ ಕೈ ಚಾಚಿದ್ದಾರೆ. ಸಾಲಕ್ಕಾಗಿ ಮೋರೆ ಹೋಗಿದ್ದಾರೆ.
ಇಂತಹ ನಾಟಿ ವ್ಯದ್ಯರಿಂದ ಅದೆಷ್ಟೋ ಬಡ ಕುಟುಂಬಗಳು ಮೋಸಹೋಗಿದ್ದಾರೆ.ಮುಗ್ದಜನರನ್ನು ಮೋಸ ಮಾಡುವ ಇಂತಹ ವ್ಯದ್ಯರನ್ನು ಬಿಟ್ಟು ಇಗಲಾದರು ಎಚ್ಚರಿಕೆಯಿಂದ ಇರಿ.

ಪತ್ರಕರ್ತ
ರಾಯಚೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version