ದಿನದ ಸುದ್ದಿ
ಸಿದ್ದರಾಮಯ್ಯ ಬೆಂಕಿ ಹಾಗೆ ; ಅದರ ಜೊತೆ ಸರಸ ಬೇಡ : ನಟ ದುನಿಯಾ ವಿಜಯ್
ಸುದ್ದಿದಿನ, ಮೈಸೂರು : ಸಿದ್ದರಾಮಯ್ಯ ಅವರು ಬೆಂಕಿ ಇದ್ದ ಹಾಗೆ ಬೆಂಕಿಯ ಜೊತೆ ಸರಸ ಆಡಬಾರದು ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಟಾಂಗ್ ಕೊಟ್ಟರು ನಟ ದುನಿಯಾ ವಿಜಯ್.
ನಟ ದುನಿಯಾ ವಿಜಿ, ನಟಿ ನಿಶ್ವಿಕಾ ನಾಯ್ಡು ಅವರು ಇಂದು ವರುಣಾ ವಿಧಾನಸಭೆ ಕ್ಷೇತ್ರದ ಚಿಕ್ಕಹಳ್ಳಿ, ಬುಗತಗಳ್ಳಿ ಹಾಗೂ ವಾಜಮಂಗಲ ಗ್ರಾಮಗಳಲ್ಲಿ ರೋಡ್‌ಶೋ ನಲ್ಲಿ ಪಾಲ್ಗೊಂಡು, ಪ್ರಚಾರದ ರಂಗೇರಿಸಿದರು.
“ಸಿದ್ದರಾಮಯ್ಯ ಗೆಲ್ಲಬೇಕು, ಅವರು ನಮ್ಮವರು” ಎಂಬ ನನ್ನ ಮೇಲಿರುವ ಪ್ರೀತಿ ಅಭಿಮಾನದ ಕಾರಣಕ್ಕೆ ಇಷ್ಟುದೂರ ಬಂದು ಹಲವು ಗಂಟೆಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ವಿಜಿಗೆ ಧನ್ಯವಾದಗಳು. ನಿಮ್ಮ ಈ ಕೋರಿಕೆಯನ್ನು ವರುಣಾದ ನನ್ನ ಜನ ಖಂಡಿತಾ ಈಡೇರಿಸುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243