/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | 58 ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಪಾಲಿಕೆ ಚುನಾವಣೆ : ಅಂತಿಮ ಕಣದಲ್ಲಿ 208 ಅಭ್ಯರ್ಥಿಗಳು

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆಯ 45ವಾರ್ಡುಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದವರ ಪೈಕಿ 208 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದು, 58ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿರುತ್ತಾರೆ.

ಪಾಲಿಕೆ ಚುನಾವಣೆಗೆ ಒಟ್ಟು 375 ನಾಮಪತ್ರಗಳು ಸ್ವೀಕೃತವಾಗಿದ್ದು, ಇದರಲ್ಲಿ 65ನಾಮಪತ್ರಗಳು ತಿರಸ್ಕೃತವಾಗಿವೆ. 266ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತರಾಗಿದ್ದರು.

ಉಮೇದುವಾರಿಕೆ ಹಿಂತೆಗದುಕೊಳ್ಳುವ ದಿನ ನ.4ರಂದು 208ಅಭ್ಯರ್ಥಿಗಳು ಅಂತಿಮ ಕಣದಲಲಿ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 44ಅಭ್ಯರ್ಥಿಗಳು, ಬಿಜೆಪಿಯಿಂದ 45 ಅಭ್ಯರ್ಥಿಗಳು, ಜೆಡಿಎಸ್‌ನಿಂದ 23 ಅಭ್ಯರ್ಥಿಗಳು, ಸಿಪಿಐ ನಿಂದ 06 ಅಭ್ಯರ್ಥಿಗಳು, ಬಿಎಸ್‌ಪಿ 03 ಅಭ್ಯರ್ಥಿ, ಕೆಪಿಜೆಪಿ ಯಿಂದ 02 ಅಭ್ಯರ್ಥಿ, ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದಿAದ 01 ಅಭ್ಯಥಿ, ಪಕ್ಷೇತರ 54 ಸೇರಿದಂತೆ ಒಟ್ಟು 208 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version