ದಿನದ ಸುದ್ದಿ
ಹಾಸನ : ಜನ್ಮ ನೀಡಿದ ಕೆಲವೇ ಕ್ಷಣದಲ್ಲಿ ಆನೆ ಮರಿ ಸಾವು
ಸುದ್ದಿದಿನ ಡೆಸ್ಕ್ : ಜನ್ಮ ನೀಡಿದ ಕೆಲವೇ ಕ್ಷಣದಲ್ಲಿ ಆನೆ ಮರಿ ಸಾವನ್ನಪ್ಪಿರುವ ದಾರುಣ ಘಟನೆಯು ಹಾಸನ ಜಿಲ್ಲೆ ಸಕಲೇಶಪು ತಾ ಕೊತ್ತನಹಳ್ಳಿಯ ಪೂನ್ನಪ್ಪ ಎಂಬುವವರ ಜಮೀನಿನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಆರು ಘಂಟೆಗೆ ಹೆಣ್ಣು ಮರಿಗೆ ಜನ್ಮನೀಡಿದ್ದ ಆನೆಯು, ತನ್ನ ಮರಿ ಆನೆಯನ್ನು ಕಳೆದುಕೊಂಡು ಮೂಕ ರೋಧನೆ ಆನುಭವಿಸುತ್ತಿದೆ. ಕಳೆದ ಹದಿನೈದು ದಿನಗಳ ಹಿಂದೆಯೂ ಇಂತದೇ ಘಟನೆ ನಡೆದಿತ್ತು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಆನೆಗಳ ಉಪಟಳದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401